ಜಿಲ್ಲೆ

ಚಿತ್ರದುರ್ಗದಲ್ಲಿ ಕಮಲ ಪಡೆಯಿಂದ ಸಂಭ್ರಮಾಚರಣೆ

ಚಿತ್ರದುರ್ಗ: ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಶೇ.28ರಿಂದ 18 ಹಾಗೂ ಶೇ 12ರಿಂದ 5ಕ್ಕೆ ಇಳಿಸಿದೆ ಎಂದು ಬಿಜೆಪಿ ಜಿ ಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಹೇಳಿದರು.

ಜಿಎಸ್‌ಟಿ ಕಡಿತಗೊಳಿಸಿರುವ ಕೇಂದ್ರದ ನಿರ್ಧಾರ ಸ್ವಾಗತಿಸಿ ಬಿಜೆಪಿ ಕಾರ‌್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಂಭ್ರ ಮಾಚರಣೆಯಲ್ಲಿ ಮಾತನಾಡಿದ ಅವರು,ಜಿಎಸ್‌ಟಿ ಸುಧಾರಣೆ ಕ್ರಮ ಆತ್ಮ ನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾ ಗಿದೆ. ಇದರಿಂದ ಜನರ ಉಳಿತಾಯಕ್ಕೆ ನೆರವಾಗಲಿದೆ. ದೇಶದ ಪ್ರಗತಿಗೆ ಇನ್ನೂ ಹೆಚ್ಚಿನ ವೇಗ ಸಿಗಲಿದೆ,ಉದ್ಯಮದ ಸರಳತೆ ಹೆಚ್ಚಿಸಿ, ಹೂ ಡಿಕೆದಾರರನ್ನು ಆಕರ್ಷಿಸಲಿವೆ. ನಾಗರಿಕರಿಗೆ ಡಬಲ್ ಧಮಾಕ ಆಗಿದೆ. ಸಾರ್ವಜನಿಕರ ಖರ್ಚುವೆಚ್ಚ ತಗ್ಗಲಿದೆ ಎಂದರು.

ರಾಜ್ಯರೈತ ಮೋರ್ಚಾ ಕಾರ‌್ಯದರ್ಶಿ ಮಲ್ಲಿಕಾರ್ಜನ್ ಮಾತನಾಡಿ,ಜಿಎಸ್‌ಟಿ ಪರಿಷ್ಕರಣೆ ಸರ್ಕಾರದ’ನಾಗರಿಕ ದೇವೋ ಭವ’ ಎಂಬ ಮಂತ್ರವನ್ನು ಪ್ರತಿನಿಧಿಸುತ್ತದೆ. ಇದರಿಂದಾಗಿ ನಿರ್ಮಾಣ ಮತ್ತು ಆರೋಗ್ಯ ಕ್ಷೇತ್ರದ ಖರ್ಚನ್ನು ತಗ್ಗಿಸುವುದರ ಜತೆಗೆ ನಿತ್ಯ ಬಳಕೆ ವಸ್ತುಗಳ ಬೆಲೆ ಇಳಿಯಲಿದೆ. ನವರಾತ್ರಿ ಮೊದಲ ದಿನದಂದು ಭಾರತ ಇಟ್ಟಿರುವ ಬಹು ದೊಡ್ಡ ಹೆಜ್ಜೆಯಾಗಿದೆ ಎಂದರು. ಇದಕ್ಕೂ ಮುನ್ನ ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ,ಆಯುಷ್ಯಕ್ಕಾಗಿ ಪ್ರಾರ್ಥಿಸಲಾಯಿತು.

ಮಾಧುರಿಗಿರೀಶ್,ಸಿದ್ದಾಪುರ ಸುರೇಶ್,ವೆಂಕಟೇಶ್‌ಯಾದವ್,ಲೋಕೇಶ್,ಕೆ.ನಾಗರಾಜ್,ನಾಗರಾಜ್‌ಬೇದ್ರೆ, ಮೋಹನ್,ಲಿಂಗರಾ ಜು,ಕಿರಣ್,ಚಾಲುಕ್ಯ ನವೀನ್,ನಂದಿನಾಗರಾಜ್,ಶಂಭು,ಪರಶುರಾಮ್,ಚಂದ್ರಿಕಾ,ಕವನ, ಬಸಮ್ಮ, ಲೀಲಾವತಿ,ಶಾಂತಮ್ಮ, ಕವಿತಾ, ಮ ಹಾಂತೇಶ್‌ಯಾದವ್,ದೇವೇಂದ್ರಪ್ಪ, ರಮೇಶ್, ಶಶಿಧರ್, ಮಲ್ಲಿಕಾರ್ಜನ್,ಸಿದ್ದೇಶ್,ಕುಮಾರ ಮಾರಘಟ್ಟ,ರಂಗಸ್ವಾಮಿ,ಅಣ್ಣಪ್ಪ, ವಸಂತ್ ಇತರರು ಇದ್ದರು.

ಇಂದು ಪ್ರದರ್ಶನಕ್ಕೆ ಚಾಲನೆ

ಜಿಲ್ಲಾ ಬಿಜೆಪಿ ಘಟಕದಿಂದ ಸೆ.23 ರಂದು ಬೆಳಗ್ಗೆ 9.30ಕ್ಕೆ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ 9.30 ಕ್ಕೆ ನಗರದ ಒನಕೆ ಓಬವ್ವ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ವಿಷಯಗಳ ಕುರಿತ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಸಂಸದ ಗೋವಿಂದ ಎಂ.ಕಾರಜೋಳ ಅವರು ಉದ್ಘಾಟಿಸುವರು. ಶಾಸಕ ಡಾ.ಎಂ.ಚಂದ್ರಪ್ಪ, ಎಂಎಲ್‌ಸಿ ಕೆ.ಎಸ್.ನವೀನ್,ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ಎಸ್.ಕೆ.ಬಸವರಾಜನ್,ನೇರಲಗುಂಟೆ ತಿಪ್ಪೇಸ್ವಾಮಿ,ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿರುವ ರು.