ಚಿತ್ರದುರ್ಗ: ಮಧ್ಯಕರ್ನಾಟಕದ ಚಿತ್ರದುರ್ಗ ಸೇರಿ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಕಲ್ಯಾಣ ಕರ್ನಾಟಕ ಮಾದರಿ 371ಜೆ ವಿಶೇಷ ಸ್ಥಾನ ಸಿಗಲಿ ಎಂದು ರಾ ಜನಹಳ್ಳಿ ಶ್ರೀ ವಾಲ್ಮೀಕಿ ಗುರು ಪೀಠದ ಶ್ರೀ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಘ, ಭಾನುವಾರ ತರಾಸು ರಂಗಮಂದಿರದಲ್ಲಿ ಏರ್ಪ ಡಿಸಿದ್ದ ವಾಲ್ಮೀಕಿ ನಾಯಕ ನೌಕರರ ಸಮಾವೇಶ ಹಾಗೂ ಪ್ರತಿಭಾಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದ ಶ್ರೀಗ ಳು, 371ಜೆ ಸ್ಥಾನದೊಂದಿಗೆ ಕೇಂದ್ರದಿಂದ ವಿಶೇಷ ಅನುದಾನ ದೊರೆತರೆ, ಈ ಜಿಲ್ಲೆಗಳ ನಾಯಕ ಸಮುದಾಯದ ಜನರ ಅಭಿವೃದ್ಧಿಗೂ ಪೂರಕವಾಗಲಿದೆ. ರಾಜನಹಳ್ಳಿ ವಾಲ್ಮೀಕಿ ಜಾತ್ರಾಮಹೋತ್ಸವದಲ್ಲಿ ಈ ಕುರಿತಂತೆ ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದರು.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಸಂದರ್ಭದಲ್ಲಿ,ಶ್ರೀರಾಮಾಯಣ ರಚಿಸಿದ ಶ್ರೀ ಮಹರ್ಷಿ ವಾ ಲ್ಮೀಕಿ, ಬೇಡರಕಣ್ಣಪ್ಪ ಹಾಗೂ ಏಕಲವ್ಯರಿಗೆ ಈ ದೇಶದಲ್ಲಿ ಸೂಕ್ತ ಪುರಸ್ಕಾರ ಸಿಕ್ಕಿಲ್ಲ. ಕರ್ನಾಟಕ ಸರ್ಕಾರ ಕೆಲವು ವರ್ಷಗಳಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುತ್ತಿದೆ. ಚಿತ್ರದುರ್ಗದಲ್ಲಿ ರಾಜವೀರ ಮದಕರಿ ನಾಯಕರ ಥೀಮ್‌ಪಾರ್ಕ್ ಆರಂಭಿಸುವ ಕೇಂದ್ರ ಗೃಹ ಸ ಚಿವ ಅಮಿತ್‌ಶಾ ಅವರ ಭರವಸೆ ಈಡೇರಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್ ಅವರು, ಮೀಸಲಾತಿ ಮೂಲಕ ಸಮಾಜದ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆ. ಆ ದರೆ ನಕಲಿ ಪ್ರಮಾಣಪತ್ರದೊಂದಿಗೆ ಕೆಲವರು ಎಸ್‌ಸಿ, ಎಸ್‌ಟಿ ಜನರ ಸೌಲಭ್ಯಗಳನ್ನು ಕಬಳಿಸುತ್ತಿದ್ದಾರೆ. ಈ ಬಗ್ಗೆ ಸಮುದಾಯ ಎಚ್ಚರ ವಹಿಸಬೇಕು.
ಎಸ್‌ಸಿ,ಎಸ್‌ಟಿ ಮೀಸಲು ಪ್ರಮಾಣ ಹೆಚ್ಚಾಗಿದ್ದು,ಇದಕ್ಕೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿದೆ. ಮೀಸಲು ಹೆಚ್ಚಳ ಬೇಡಿಕೆಗೆ ಅಡ್ಡಿಯಾಗಿದ್ದ ಕಾನೂನು ತೊಡಕು, ಅರ್ಜಿ ಹಾಕದಿರುವ ಸಮುದಾಯಕ್ಕೆ ಶೇ.10 ಮೀಸಲು ನೀ ಡಲು ಅಡ್ಡಿಯಾಗಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ಸಮಾಜ ಸಂಘಟಿತವಾಗ ಬೇಕು. 7 ಬಾರಿ ಶಾಸಕರಾಗಿರುವ ಎನ್. ವೈ.ಗೋಪಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಸಿಗಬೇಕು, ಸಮುದಾಯದವರು ಮುಖ್ಯಮಂತ್ರಿ ಆಗಬೇಕೆಂದರು.
ಸಮಾರಂಭ ಉದ್ಘಾಟಿಸಿದ ಹಾಗೂ ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ಅವರ ಪರವಾಗಿ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಮಾತನಾಡಿ, ಚಿತ್ರದುರ್ಗಕ್ಕೆ 371 ಜೆ ಸ್ಥಾನ ಸಿಗಬೇಕಿದೆ. ಈ ನಿಟ್ಟಿ ನಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ನಡೆಯುತ್ತಿರುವ ಸಮೀಕ್ಷೆ ಚಿತ್ರದುರ್ಗ ಮತ್ತಿತರೆಡೆ ನಡೆಯ ಬೇಕು. ಬೇಡಿಕೆ ಈಡೇರಿಕೆ ಗಾಗಿ ಸರ್ಕಾರಗಳ ಮೇಲೆ ಒತ್ತಡ ಹಾಕಬೇಕು. ರಾಜ್ಯಸರ್ಕಾರದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾಗಿರುವ ಎನ್.ವೈ.ಹನುಮ ಂತ ಅವರು, ಪ್ರಶಸ್ತಿಯ ಮೊತ್ತ 5 ಲಕ್ಷ ರೂ.ಗಳನ್ನು ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಬಳಸಲು ಸಮಾಜಕ್ಕೆ ಕೊಟ್ಟಿದ್ದಾರೆ ಎಂದರು.
ನಾಯಕ ಸಮುದಾಯವನ್ನು ಪರಿಶಿಷ್ಟ ಪಂಗಡವೆಂದು ಗುರುತಿಸಲು ಒತ್ತಾಯಿಸಿ ಪಾದರಕ್ಷೆ ಧರಿಸದೆ ಹೋರಾಟ ನಡೆಸಿದ್ದ ಬಳ್ಳಾರಿ ಹಲ್ಲಿಪುರ ಹನುಮಂತಪ್ಪ ಹಾಗೂ ಎಲ್.ಜಿ.ಹಾವನೂರ್ ಅವರ ಹೆಸರಿನ ವೇದಿಕೆಗಳಡಿ, ಸಮಾಜದ ಸಂಘಟನೆ,ಪ್ರತಿಭಾವಂತರನ್ನು ಗು ರುತಿಸುವ ಕೆಲಸವಾಗ ಬೇಕಿದೆ ಎಂದರು.
ಸಚಿವ ಸತೀಶ್‌ಜಾರಕಿಹೊಳಿ ಅವರ ಪುತ್ರ ರಾಹುಲ್‌ಜಾರಕಿಹೊಳಿ ಮಾತನಾಡಿ, ಯಾವುದೇ ಸರ್ಕಾರವಿರಲಿ ಅದಕ್ಕೆ ಒಳ್ಳೆಯ ಹೆಸರು ತಂದು ಕೊಡುವಂಥವರು ನೌಕರರು. ಸಮುದಾಯದ ನೌಕರರೂ ಉತ್ತಮ ಕೆಲಸ ಮಾಡಲಿ. ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವು ದಕ್ಕಿಂತ ಸಮಾಜಕ್ಕೆ ನಾವು ಏನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನೂ ಪ್ರಶ್ನಿಸಿಕೊಳ್ಳ ಬೇಕೆಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ 371ಜೆ ಸ್ಥಾನಕ್ಕಾಗಿ ನಿರಂತರ ಪಕ್ಷಾತೀತ ಹೋರಾಟದ ಅಗತ್ಯವಿದೆ. ಗೋಪಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಸಿಗಲಿ ಎಂದರು. ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಪಿಎಚ್‌ಡಿ ಪದವಿ ಪುರಸ್ಕೃತರನ್ನು ಗೌರವಿಸಲಾಯಿತು. ಸಮಾಜದ ಸಾಧಕರಾದ ನಿವೃತ್ತ ಡಿಐಜಿ ಎಂ.ಎನ್.ನಾ ಗರಾಜ್, ಪತ್ರಕರ್ತ ಎಂ.ಎನ್.ಅಹೋಬಲಪತಿ, ಉದ್ಯಮಿಗಳಾದ ಪಿ.ವಿ.ಅರುಣ್‌ಕುಮಾರ್, ಸನ್ನಿಆರ್.ರಾಜಮನೆ, ಥ್ರೋಬಾಲ್ ಆ ಟಗಾರ ಆರ್.ಹೊಯ್ಸಳ,ಶಿಕ್ಷಕಿ ಕೆ.ಒ.ರತ್ನಮ್ಮ, ಡಾ.ಎನ್.ಬಿ.ಪ್ರಹ್ಲಾದ್,ಡಾ.ಎಚ್.ಟಿ.ತೇಜಸ್ವಿ, ಡಾ.ಎಸ್.ಕೆ.ಮೋಹನ್,ಮುಖ್ಯಲೆಕ್ಕಾಧಿ ಕಾರಿ ಸಿ.ಜೆ.ಶ್ರೀನಿವಾಸ್,ನಾಟಕ ಅಕಾಡೆಮಿ ಸದಸ್ಯ ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಾ.ಎಚ್.ಗುಡ್ಡದೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ನಾಯಕ ಸಮಾಜದ ಅಧ್ಯ ಕ್ಷ ಎಚ್.ಜೆ.ಕೃಷ್ಣಮೂರ್ತಿ,ತಾಲೂಕು ಅಧ್ಯಕ್ಷ ಬಿ.ಕಾಂತರಾಜ್,ಎಸ್.ಸಂದೀಪ್,ನಾಗೇಂದ್ರಬಾಬು,ಡಾ.ಎಚ್.ಪಾಲಾಕ್ಷ,ಕೆ.ಪಿ.ಮಧುಸೂ ದನ್,ಪಾಪಯ್ಯ,ಮಾರಣ್ಣ,ಮಹಾಂತೇಶ್,ದೀಪಕ್,ಜೆ.ವೈಶಾಲಿ,ಎಸ್.ಎಸ್.ಗಣೇಶ್,ಡಾ.ಎಸ್.ರಂಗಸ್ವಾಮಿ, ಡಾ.ಸಾಲಿಮಂಜಪ್ಪ,ತಿಪ್ಪೇ ಸ್ವಾಮಿ,ಎ.ರಮೇಶ್,ಪ್ರೊ.ಟಿ.ಎಲ್.ಸುಧಾಕರ್,ಮಂಜುನಾಥ್,ಬಸವರಾಜ ಟಿ.ಗೊರವರ್,ಅಂಜಿನಪ್ಪ, ಕೆ.ಪಿ.ಸಂಪತ್‌ಕುಮಾರ್,ಜಿ. ಬಿ.ಮಹಂತೇಶ್,ಎಸ್.ಮಂಜುನಾಥ್,ಎನ್.ಪಿ.ರವಿ,ಎಚ್.ಮಹೇಶ್,ರವಿ ಮತ್ತಿತರ ಅಧಿಕಾರಿ,ನೌಕರರು,ಸಮುದಾಯದ ಹಾಗೂ ಸ ಂಘದ ಪ್ರಮುಖರು ಇದ್ದರು.