ಚಿತ್ರದುರ್ಗ: ಚಿತ್ರದುರ್ಗ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದಿಂದ,ನಗರದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರು ಬಿಜೆಪಿಯಿಂದ ಈ ಬಾರಿ ಸ್ಪರ್ಧಿಸಲಿದ್ದಾರೆಯೇ?
ಕಳೆದ ಲೋಕಸಭಾ ಚುನಾವಣೆಯಲ್ಲೂ ಅವರ ಹೆಸರು ಕೇಳಿ ಬಂದಿತ್ತು. ಈಗ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಶ್ರೀಗಳು ಕರ್ನಾಟಕದ ಯೋಗಿ ಆದಿತ್ಯನಾಥ್ ಆಗುತ್ತಾರೆಯೇ ಎಂಬ ಮಾತುಗಳು ಆಗ ಕೇಳಿ ಬಂದಿದ್ದವು. ಈಗ ಈ ಚುನಾವಣೆ ವೇಳೆಯಲ್ಲಿ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಸಂಘ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಶ್ರೀಗಳಿಗೆ, ಪಕ್ಷದ ರಾಜ್ಯ,ರಾಷ್ಟ್ರೀಯ ನಾಯಕರೊಂದಿಗೂ ಒಳ್ಳೆಯ ಒಡನಾಟವಿದೆ.
ಮತ್ತೆ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಕ್ಷೇತ್ರದ ಸಂಸದ,ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಇತ್ತೀಚಿನ ಹೇಳಿಕೆ(ರಾಜ ಕಾರಣದಿಂದ ದೂರ ಇರಲು ಬಯಸಿದ್ದೇನೆ)ಯಿಂದ ಬಿಜೆಪಿಯಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮತಗಳನ್ನು ಸೆಳೆಯುವ ಭಾಗವಾಗಿ ಮಾದಾರ ಶ್ರೀಗಳನ್ನು ಚಿತ್ರದುರ್ಗದಿಂದ ಕಣಕ್ಕೆ ಇಳಿಸಲು ಬಿಜೆಪಿ,ಪರಿವಾರ ತಂತ್ರ ರೂಪಿಸಿದೆನ್ನಲಾಗಿದೆ.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಚಿತ್ರದುರ್ಗದಿಂದ ಕಣಕ್ಕೆ ಇಳಿಯುತ್ತಾರೆಂಬ ಸುದ್ದಿ ಹರಡಿತ್ತಾದರೂ ಅವರು ಒಪ್ಪಿ ಲ್ಲವೆನ್ನಲಾಗಿದೆ. ಸ್ಥಳೀಯರು,ಅನ್ಯಜಿಲ್ಲೆಯವರು ಎಂಬ ಮಾತು ಕ್ಷೇತ್ರದಲ್ಲಿ ಪ್ರಬಲವಾಗಿದೆ ಕಾರಣಕ್ಕೂ ಕಾರಜೋಳ ಅವರು ದುರ್ಗ ದಿ ಂದ ಸ್ಪರ್ಧಿಸಲು ನಿರಾಕರಿಸಿದ್ದಾರೆನ್ನಲಾಗುತ್ತಿದೆ.
ಕಳೆದ ಚುನಾವಣಾ ಸಂದರ್ಭದಲ್ಲೂ ಚನ್ನಯ್ಯ ಶ್ರೀಗಳ ಹೆಸರು ಚರ್ಚೆಗೆ ಬಂದಿತ್ತು. ಈ ಬಾರಿಯೂ ಮತ್ತೆ ಅವರ ಹೆಸರು ಕೇಳಿ ಬ ರುತ್ತಿದೆ, ಆದರೆ ಅಭ್ಯರ್ಥಿ ಯಾರೆಂಬುದನ್ನು ಹೈಕಮಾಂಡ್ ಅಂತಿಮವಾಗಿ ನಿರ್ಧರಿಸುತ್ತದೆ ಎಂದು ಪಕ್ಷದ ನಾಯಕರೊಬ್ಬರು ಪ್ರತಿ ಕ್ರಿ ಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳೊಂದಿಗೆ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರ ಗಳ ನ್ನು ಒಳಗೊಂಡಿರುವ ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ಕಾಂಗ್ರೆಸ್ ಹಾಗೂ ಒಬ್ಬರು ಬಿಜೆಪಿ ಶಾಸಕರು ಇದ್ದಾರೆ.
ವಿಧಾನಸಭಾ ಚುನಾವಣೆ ಗೆಲುವಿನ ರಣೋತ್ಸಾಹದಲ್ಲಿರುವ ಕಾಂಗ್ರೆಸ್ ಚಿತ್ರದುರ್ಗದಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಬಿಜೆಪಿ,ಜೆಡಿಎಸ್ ಮೈತ್ರಿ,ಶ್ರೀರಾಮಂದಿರ ಉದ್ಘಾಟನೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಜಯ ಸಾಧಿ ಸು ವ ವಿಶ್ವಾಸದಲ್ಲಿ ಬಿಜೆಪಿ ಇದೆ.
ಮೊದಲ ಬಾರಿಗೆ 2009ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಜನಾರ್ದನ ಸ್ವಾಮಿ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಅವರ ಅಧಿಕಾರಾವಧಿ ಕ್ಷೇತ್ರಕ್ಕೆ ಡಿಆರ್‌ಡಿಒ,ಇಸ್ರೋ,ಬಾರ್ಕ್ ಹಾಗೂ ಐಐಎಸ್‌ಸಿ ಸಂಸ್ಥೆಗಳು ಮಂಜೂರಾಗಿದ್ದವು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್,ಮಾಜಿ ಶಾಸಕ ಪ್ರೊ.ಲಿಂಗಪ್ಪ,ಡಾ.ರಮೇಶ್,ಸೂರನಹಳ್ಳಿ ವಿಜಯಕುಮಾರ್,ಮೂಡಿಗೆರೆಯ ನರೇಂದ್ರ,ನಿವೃತ್ತ ಐಎಎಸ್ ಅಧಿಕಾರಿಕಾರಿಗಳಾದ ಲಕ್ಷ್ಮಿನಾರಾಯಣ,ಎಂ.ಕೆ.ಶ್ರೀರಂಗಯ್ಯ ಮೊದ ಲಾದ ಪ್ರಮುಖರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ.