ಚಿತ್ರದುರ್ಗ: ಚಿತ್ರದುರ್ಗ ತಾಲೂಕು ಚಿತ್ರದುರ್ಗ-1ರಲ್ಲಿ 42.8ಮಿ.ಮೀ ಮಳೆಯಾಗಿದ್ದು,ಇದು ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸುರಿದ ಅಧಿಕ ಮ ಳೆಯಾಗಿದೆ. ಚಿತ್ರದುರ್ಗ-2ರಲ್ಲಿ 9.2ಮಿ.ಮೀ.,ಭರಮಸಾಗರ 4.4ಮಿ.ಮೀ. ಹೊಸದುರ್ಗ 30.4ಮಿ.ಮೀ.,ಬಾಗೂರು 5.5 ಮಿ. ಮೀ.,ಮಾಡದಕೆರೆ 13 ಮಿ.ಮೀ.,ಮತ್ತೋಡು 3.2ಮಿ.ಮೀ.ಹಾಗೂ ಶ್ರೀರಾಂಪುರದಲ್ಲಿ 5.2 ಮಿ.ಮೀ. ಹೊಳಲ್ಕೆರೆ 19.2 ಮಿ.ಮೀ., ರಾಮಗಿರಿ 8.4ಮಿ.ಮೀ.,ಚಿಕ್ಕಜಾಜೂರು 41.2 ಮಿ.ಮೀ.,ಎಚ್.ಡಿ.ಪುರ 36.2ಮಿ.ಮೀ.,ತಾಳ್ಯ 4.2ಮಿ.ಮೀ. ಹಿರಿಯೂರು ತಾ ಲೂಕು ಇಕ್ಕನೂರಿನಲ್ಲಿ 22.4 ಮಿ.ಮೀ.ಹಾಗೂ ಈಶ್ವರಗೆರೆಯಲ್ಲಿ 5.8 ಮಿ.ಮೀ.ಮಳೆಯಾಗಿದೆ.
ಜಿಲ್ಲಾದ್ಯಂತ 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಹಾಗೂ 0.54 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ತಾ ಲೂಕಿನಲ್ಲಿ 1,ಹೊಸದುರ್ಗ ತಾಲೂಕಿನಲ್ಲಿ 2,ಹೊಳಲ್ಕೆರೆ 1 ಮನೆ ಹಾಗೂ ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹೊಳಲ್ಕೆರೆ ತಾ ಲೂಕಿನಲ್ಲಿ 0.14 ಹೆಕ್ಟೇರ್ ಹಾಗೂ ಹಿರಿಯೂರು ತಾಲೂಕಿನಲ್ಲಿ 0.40 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಮಳೆ,ಗಾಳಿಗೆ ಬಾಳೆ ನಾಶ
ಹೊಳಲ್ಕೆರೆ ತಾಲೂಕು ರಾಮಗಿರಿ ಗೊಲ್ಲರಹಟ್ಟಿ ರಮೇಶ ಅವರ 1.08 ಎಕರೆ ಜಮೀನಿನಲ್ಲಿದ್ದ ಬಾಳೆ ಬೆಳೆ ಬಿರುಗಾಳಿ ಹಾಗೂ ಮಳೆ ಯಿಂದ ನಾಶವಾಗಿದೆ. ಗುರುವಾರದ ಮಳೆ ಮತ್ತು ಬಿರುಗಾಳಿಯಿಂದ ಬಾಳೆ ಹಾಳಾಗಿ ಲಕ್ಷಾಂತರ ರೂ.ನಷ್ಟವಾಗಿದೆ. ಗ್ರಾಮದ ಸಂ ತೋ ಷ್ ಅವರ 1.21 ಎಕರೆ ಜಮೀನಿನಲ್ಲಿದ್ದ ಟ್ಯಾಂಕರ್ ಮೂಲಕ ನೀರು ಹಾಯಿಸಿದ್ದ ಬಾಳೆ ಕೂಡ ನಾಶವಾಗಿದ್ದು,ಬೆಳೆ ನಷ್ಟ ಪರಿಹಾರ ಭ ರಿಸುವಂತೆ ಸರ್ಕಾರಕ್ಕೆ ನೊಂದ ರೈತರು ಮನವಿ ಮಾಡಿದ್ದಾರೆ ಎಂದು ಗ್ರಾಮದ ರಾಜಪ್ಪ ಎಂಬುವರು ತಿಳಿಸಿದ್ದಾರೆ.
ಬೆಸ್ಕಾಂ ಕಚೇರಿ ಸ್ಥಳಾಂತರ
ಚಿತ್ರದುರ್ಗ ವಿಪಿ ಬಡಾವಣೆ,ಮಾಜಿ ಸಿಎಂ ನಿಜಲಿಂಗಪ್ಪ ಅವರ ನಿವಾಸಕ್ಕೆ ಹೊಂದಿಕೊಂಡಿರುವ ಬೆಸ್ಕಾಂ ಗ್ರಾಮೀಣ ಉಪವಿಭಾಗ ಕ ಚೇರಿಯಲ್ಲಿ ಸಿಬ್ಬಂದಿ ವಿದ್ಯುತ್‌ಗೆ ಶಾಕ್‌ಗೆ ಅನುಭವಿಸುವಂತಾಗಿದ್ದು,ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
ಹಳೆಯ ಬಾಡಿಗೆ ಕಟ್ಟಡದಲ್ಲಿದ್ದ ಈ ಕಚೇರಿಯನ್ನು ಸ್ಥಳಾಂತರಿಸುವಂತೆ ಸಿಬ್ಬಂದಿ ಕಳೆದ ಮೂರು ವರ್ಷಗಳಿಂದ ಮೇಲಧಿಕಾರಿಗಳಿಗೆ ಮನವಿ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಎಂದಿನಂತೆ ಕಚೇರಿಗೆ ಆಗಮಿಸಿದ ಮಹಿಳಾ ಉದ್ಯೋಗಿಯೊಬ್ಬರು ಕಂಪ್ಯೂಟರ್ ಆನ್ ಮಾಡುತ್ತಿದ್ದಂತೆ ಅವರಿಗೆ ಕರೆಂಟ್ ಶಾಕ್ ಹೊಡೆದಿದೆ. ಶುಕ್ರವಾರ ಸುರಿದ ಮಳೆಯಿಂದಾಗಿ ಇಡೀ ಕಟ್ಟಡ ಅರ್ಥಿಂಗ್ ಆಗಿತ್ತು.
ಕಚೇರಿಯಲ್ಲಿ ಮೂಲ ಸೌಕರ್ಯಗಳಿಲ್ಲ,ಕಟ್ಟಡವೂ ಶಿಥಿಲವಾಗಿದೆ ಎಂದು ಹಲವು ಬಾರಿ ತಿಳಿಸಿದ್ದರೂ ಕಿವಿಗೆ ಹಾಕಿಕೊಳ್ಳದ ಅಧಿಕಾರಿ ಗಳ ನಡೆಗೆ ಬೇಸರಗೊಂಡ ಮಹಿಳಾ ಸಿಬ್ಬಂದಿ ಕಚೇರಿ ಬಳಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಉದ್ಯೋಗಿಗಳ ಮನವಿಗೆ ಕೂಡಲೇ ಸ್ಪ ಂದಿಸಿದ ಹಿರಿಯ ಅಧಿಕಾರಿಗಳು ಡಿಸಿ ನಿವಾಸದ ಸಮೀಪದಲ್ಲಿ ಬೆಸ್ಕಾಂ ನೂತನ ಕಚೇರಿ ಸಂಕೀರ್ಣ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಿದರು.