ಗೋಣಿಕೊಪ್ಪ: ಮುಳಿಯ ಪ್ರತಿಷ್ಠಾನ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮುಳಿಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೊಡಗಿನ ಆಭರಣಗಳ ಚಿತ್ರರಚನೆ ಸ್ಪರ್ಧೆಯಲ್ಲಿ ಆಭರಣಗಳು ಚಿತ್ರಕಲೆಯಲ್ಲಿ ಮೂಡಿ ಬಂತು.
ಕೊಕ್ಕೆತಾತಿ, ಪತ್ತಾಕ್, ಪಚೆಕತ್ತಿ, ಒಡಿಕತ್ತಿ, ಕರಿಮಣಿ, ಕಡಗ ಆಭರಣಗಳಿಗೆ ಕಾಗದದಲ್ಲಿ ರೂಪ ನೀಡಲಾಗಿತ್ತು. ಸಾಂಪ್ರದಾಯಿಕ ಆಭರಣಗಳಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. 80ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಮಕ್ಕಳು ದೀಪ ಹಚ್ಚುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಳಿಯ ಪ್ರತಿಷ್ಠಾನ ಗೋಣಿಕೊಪ್ಪ ಘಟಕ ವ್ಯವಸ್ಥಾಪಕ ಬಿ.ಎಸ್.ಕಿಶೋರ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.