ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿತ್ರ ಕಲೆಯಲ್ಲಿ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಿದ್ದು ಧಾರವಾಡ ನೆಲ. ಈ ನೆಲದಲ್ಲಿ ಹೋರಾಟದ ಕಿಚ್ಚು, ಶಕ್ತಿ ಇದೆ. ಆ ಕಾರಣಕ್ಕೆ ನಿರಂತರವಾಗಿ ಚಲನಶೀಲವಾಗಿರುತ್ತಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘವು ನೂತನವಾಗಿ ನಿರ್ಮಿಸಿರುವ ಚಿತ್ರಕಲಾ ಗ್ಯಾಲರಿ ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆಗೆ ಪ್ರಾಮುಖ್ಯತೆ ಕೊಟ್ಟ ಕರ್ನಾಟಕ ವಿದ್ಯಾವರ್ಧಕ ಸಂಘದ ನಡೆ ಮಾದರಿಯಾಗಿದೆ. ಸಾಂಪ್ರದಾಯಕ ಚಿತ್ರಕಲೆ ನಮ್ಮ ಕಲೆ. ಅದಕ್ಕೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಲಲಿತ ಕಲಾ ಅಕಾಡೆಮಿಯು ಸಾಂಪ್ರದಾಯಿಕ ಕಲೆಗಳಿಗೆ ಪ್ರದರ್ಶನ, ಸ್ಪರ್ಧೆ ಏರ್ಪಡಿಸಿ ಸ್ಪರ್ಧೆಯಲ್ಲಿ ಬಹುಮಾನ ನೀಡಲು ಯೋಜಿಸಿದೆ. ಇದಕ್ಕೆ ಕೈ ಜೋಡಿಸಲು ಹಲವಾರು ದಾನಿಗಳು ಮುಂದೆ ಬಂದಿದ್ದಾರೆ ಎಂದರು.
ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಹಿರಿಯ ಕಲಾವಿದ ಎಂ.ಆರ್. ಬಾಳಿಕಾಯಿ ಮಾತನಾಡಿ, ಕಲಾವಿದನಾದವನು ಎಲ್ಲ ರಸಭಾವನೆಗಳನ್ನು ಹೊಂದಿರಬೇಕು. ನೋಡುಗ ಕಲಾಕೃತಿಯ ಕಲೆಯನ್ನು ಒಳಗಣ್ಣಿನಿಂದ ನೋಡಬೇಕು. ಅಂದಾಗ ಕಲೆ ಅರ್ಥವಾಗಲು ಸಾಧ್ಯ ಎಂದರು.
ಗದಗ ವಿಜಯ ಕಲಾ ಕಾಲೇಜಿನ ಸಂಸ್ಥಾಪಕ ಅಶೋಕ ಅಕ್ಕಿ ಮಾತನಾಡಿ, ಲಲಿತ ಕಲೆ, ಸಂಸ್ಕೃತಿಗೆ ಪ್ರೋತ್ಸಾಹದ ಕೊರತೆ ಇದೆ. ಪಿಯುಸಿ ಕಲಿಕೆಯಲ್ಲಿ ಕಲೆಗೆ ಸಂಬAಽಸಿದ ಪಠ್ಯವನ್ನು ಅಳವಡಿಸಬೇಕು. ಸಂಗೀತ ಕಲೆಯಲು ಅವಕಾಶ ಇರುವಂತೆ ಚಿತ್ರಕಲೆಯ ಕಲಿಕೆಗೂ ಅವಕಾಶ ಇರಬೇಕು ಎಂದರು.
ರೇಣುಕಾ ಮಾರ್ಕಂಡೆ, ಬಿ. ಮಾರುತಿ, ಸತೀಶ ತುರಮರಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಡಾ. ಶ್ರೀಶೈಲ ಹುದ್ದಾರ ಹಾಗೂ ಶಿವಾನಂದ ಭಾವಿಕಟ್ಟಿ, ಡಾ. ಸಿದ್ದನಗೌಡ ಪಾಟೀಲ, ಪಾರ್ವತಿ ಸುರೇಶ ಹಾಲಭಾವಿ, ಡಾ. ಆನಂದ ಪಾಟೀಲ, ಆರ್.ಯು. ಬೆಳ್ಳಕ್ಕಿ, ಇತರರಿದ್ದರು.
ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಎಫ್.ವಿ. ಚಿಕ್ಕಮಠ ಹಾಗೂ ಪ್ರೊ. ಬಸವರಾಜ ಕುರಿ ಪರಿಚಯಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು.