ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನವೆಂಬರ್ನಲ್ಲಿ ನಡೆದ ಹೈಯರ್ ಗ್ರೇಡ್ ಹಾಗೂ ಲೋವರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಅಂಬೇಡ್ಕರ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಹೈಯರ್ ಗ್ರೇಡ್ನಲ್ಲಿ ಹರೀಶ ಬಾಡದ 600ಕ್ಕೆ 450 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾನೆ. ಲೋವರ್ ಗ್ರೇಡ್ನಲ್ಲಿ ಚೈತ್ರಾ ಬಾಯಮ್ಮನವರ 447, ಸೃಷ್ಠಿ ಮಿಶ್ರೀಕೋಟಿ 431, ಅನು ನೀರಲಗಿ 429, ಚೈತ್ರಾ ಹುಬ್ಬಳ್ಳಿ 421, ರಕ್ಷಿತಾ ಚಿಟ್ಟಿ 421, ಹರಿಣಿ ಚಲವಾದಿ 411, ನಂದಾ ಕುದರಿ 409, ಸಹನಾ ಗೊನಗಿ 399, ಕವಿತಾ ಚಲವಾದಿ 392 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಧ್ಯಾಪಕ ಎನ್.ಎ. ಕಿಳ್ಳಿಕೇತರ, ಚಿತ್ರಕಲಾ ಶಿಕ್ಷಕ ಜೆ.ಎಸ್. ಮರ್ಯಾವಣ್ಣವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.