ಜಿಲ್ಲೆ

ಚಿತ್ತಾಪುರ; ಕಾರ್ಮಿಕ ವರ್ಗ ಒಗ್ಗಟ್ಟಿನಿಂದ ಕೆಲಸ ಮಾಡಲಿ

ಚಿತ್ತಾಪುರ: ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಕೊಡಿಸುವಲ್ಲಿ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.

ಅಕ್ಕಮಹಾದೇವಿ ಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಕಾರ್ಮಿಕರ ವೇದಿಕೆ ಕಚೇರಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಕಾರ್ಮಿಕರ ಬಲದಿಂದಲೇ ದೇಶ ಸಮೃದ್ಧವಾಗಿ ಸಾಗುತ್ತಿದೆ. ಕಾರ್ಮಿಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಒಬ್ಬರಿಗೊಬ್ಬರು ಸಹಾಯ, ಸಹಕಾರದೊಂದಿಗೆ ಮುಂದೆ ಸಾಗಬೇಕು. ಅನ್ಯಾಯದ ವಿರುದ್ಧ ಸಂಘಟನೆಗಳು ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ವೇದಿಕೆ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಮೇಟಿ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಪಾಟೀಲ್, ತಾಲೂಕು ಅಧ್ಯಕ್ಷ ನಾಗರಾಜ ಎನ್. ಮಾತನಾಡಿದರು. ತಹಸೀಲ್ದಾರ್ ಸೈಯ್ಯದ್ ಷಾಷಾವಲಿ ಉದ್ಘಾಟಿಸಿದರು. ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶ್ವೇತಾ ಪಾಟೀಲ್, ಪ್ರಮುಖರಾದ ನಾಗರಾಜ ಭಂಕಲಗಿ, ವೀರೇಂದ್ರ ಕೊಲ್ಲೂರ, ನರಹರಿ ಕುಲಕರ್ಣಿ, ಚಂದ್ರಶೇಖರ ಹೊಸೂರ, ಮೈಲಾರಪ್ಪ ಮೂಲಿಮನಿ, ಮಹೇಶಕುಮಾರ, ನಾಗಯ್ಯ ಸ್ವಾಮಿ ಅಲ್ಲೂರ, ಆನಂದರೆಡ್ಡಿ, ಶಂಭುಲಿAಗ ಕರದಾಳ, ಅಬ್ದುಲ್ ಕರೀಮ್, ಸುದರ್ಶನ, ನಾಗಪ್ಪ ಸಾಹು, ರುಮೀನಾ ಬೇಗಂ, ಭೀಮು ಹೋಳಿಕಟ್ಟಿ, ರವಿ ಹೂಗಾರ, ವಿಜಯಕುಮಾರ, ಭೀಮರಾವ ಕರದಾಳ, ಕೇದಾರನಾಥಗೌಡ, ರಾಚಪ್ಪ ಬಮ್ಮನಳ್ಳಿ, ನಾಗೇಶ, ಶಿವಕುಮಾರ ವಡಿಗೇರಾ, ವಿಶ್ವಾರಾಧ್ಯ ದೊಡ್ಮನಿ ಇತರರಿದ್ದರು.

ವೇದಿಕೆ ತಾಲೂಕು ಉಸ್ತುವಾರಿ ಬಸವರಾಜ ಸ್ಥಾವರಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅರ್ಜುನ ಭೀಮನಳ್ಳಿಕರ್ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಣೆ ಮಾಡಿದರು.