ಜಿಲ್ಲೆ

ಚಿಣ್ಣರೊಂದಿಗೆ ಹೆಜ್ಜೆ ಹಾಕಿದ ತಾಯಂದಿರು

ಅರಸೀಕೆರೆ: ನಗರದ ಗಣಪತಿ ಪೆಂಡಾಲಿನಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಸಾಯಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮದಲ್ಲಿ ಚಿಣ್ಣರೊಂದಿಗೆ ತಾಯಂದಿರು ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.


ನಿರೂಪಕಿ ಮಧು ಮಾಲತಿ ಮಾತನಾಡಿ, ಏಳೆಂಟು ದಶಕಗಳ ಇತಿಹಾಸ ಹೊಂದಿರುವ ಇಲ್ಲಿನ ಗಣೇಶೋತ್ಸವ ಸಾಂಸ್ಕೃತಿಕ ಚಟುವಟುಕೆಗಳಿಗೆ ಮನೆ ಮಾತಾಗಿದೆ. ಗಣಪತಿ ಭಕ್ತ ಮಂಡಳಿ 59 ದಿನ ಪೂಜಾ ಕೈಂಕರ್ಯಗಳ ಜತೆಗೆ ಹತ್ತು ಹಲವು ಧಾರ್ಮಿಕ, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದರು.


ಪುಟಾಣಿಗಳಾದ ಕಿರಣ್, ಸುಧನ್ವ, ನಿರೂಪ್, ಸುಮಿತ್, ರೋಹಿತ್, ಧನ್ವಿತಾ, ಸ್ಪೂರ್ತಿ, ಅನನ್ಯ, ದೇವಿಕಾ, ಚಾರ್ವಿ ಮೊದಲಾದ ಮಕ್ಕಳು ಹಲವು ಹಾಡುಗಳಿಗೆ ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಿದರು.