ಜಿಲ್ಲೆ

ಚಿಣ್ಣರ ಸಂಭ್ರಮದ ನಡೆ ಶಾಲೆಯ ಕಡೆಗೆ

ಚಿತ್ರದುರ್ಗ: ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಎಲ್‌ಕೆಜಿಯಿಂದ ಹೈಸ್ಕೂಲ್‌ವರೆಗಿನ ಸಿಬಿಎಸ್‌ಇ ಹಾಗೂ ರಾಜ್ಯಪಠ್ಯಕ್ರಮ ಇಂಗ್ಲಿಷ್ ಮಾಧ್ಯಮ ಶಾಲಾ ತರಗತಿಗಳು ಸೋಮವಾರದಿಂದ ಆರಂಭವಾದವು.

ತರಗತಿ ಕೊಠಡಿಗಳನ್ನು ಬಣ್ಣ,ಬಣ್ಣದ ಬಲೂನ್‌ಗಳಿಂದ ಸಿಂಗರಿಸಲಾಗಿತ್ತು. ರಜೆ ಕಳೆದು ಮತ್ತೆ ಶಾಲೆಗೆ ಮರಳಿದ ಮಕ್ಕಳನ್ನು ಶಿಕ್ಷಣ ಸಂಸ್ಥೆ ಸಿಇಒ ಎಂ.ಸಿ. ರಘುಚಂದನ್, ಆಡಳಿತಾಧಿಕಾರಿ ಚಂದ್ರಕಲಾ, ಶಿಕ್ಷಕ ವೃಂದದವರು ಬರಮಾಡಿಕೊಂಡರು. ಶಾಲೆಗೆ ಬಂದ ಮಕ್ಕಳ ಮುಖದಲ್ಲಿ ಮಂದಹಾಸವಿತ್ತು.

ಈ ವೇಳೆ ಮಾತನಾಡಿದ ರಘುಚಂದನ್, ಮಕ್ಕಳಿಗೆ ಬೇಕು ಕಲಿಕೆ.

ಕಲಿಸಲು ಬೇಕು ಗುರು. ಇಬ್ಬರಿಗೂ ಶಾಲೆಯೇ ವೇದಿಕೆ. ನಿತ್ಯದ ಪಾಠಗಳ ಕಡೆ ಹೆಚ್ಚಿನ ಗಮನ ನೀಡಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಗುರು-ಹಿರಿಯರು, ಶಾಲೆ ಹಾಗೂ ಪಾಲಕರಿಗೆ ಕೀರ್ತಿ ತರುವಂತೆ ಶುಭ ಹಾರೈಸಿದರು. ಪ್ರಾಚಾರ್ಯರು, ಶಿಕ್ಷಕರು ಇದ್ದರು.