ಜಿಲ್ಲೆ

ಚಿಣ್ಣರ ಪ್ರತಿಭೆ ಅನಾವರಣಕ್ಕೆ ಸಾಕ್ಷಿಯಾದ ಮಕ್ಕಳ ಹಬ್ಬ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಮಕ್ಕಳ ಸರ್ವಾಗೀಣ ಅಭಿವೃದ್ಧಿ ಹಾಗೂ ಸಂಪೂರ್ಣ ವ್ಯಕ್ತಿತ್ವದ ವಿಕಾಸಕ್ಕಾಗಿ ಪ್ರತಿ ವರ್ಷವೂ ಜಿಲ್ಲಾಮಟ್ಟದಲ್ಲಿ ಮಕ್ಕಳ ಹಬ್ಬ ಆಯೋಜಿಸಲಾಗು ವುದೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಹೇಳಿದರು.
ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ,ಜಿಲ್ಲಾಡಳಿತ,ಜಿಪಂ,ಜಿಲ್ಲಾಮಕ್ಕಳ ರಕ್ಷಣಾ ಘಟಕ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಶಿಕ್ಷ ಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಹಬ್ಬದಲ್ಲಿ ಮಾತನಾಡಿದ ಅವರು,ಈ ಕಾರ‌್ಯಕ್ರಮದ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸುವುದು ಅಕಾಡೆಮಿಯ ಉದ್ದೇಶವಾಗಿದೆ. ಕೋವಿಡ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಕಾರ‌್ಯಕ್ರಮವನ್ನು ಮತ್ತೆ ಆರಂಭಿಸಲಾಗಿದೆ ಎಂದರು.
ಜಾನಪದ,ಸಾಹಿತ್ಯ,ಕ್ರೀಡೆ,ಸಂಸ್ಕೃತಿ ಮೊದಲಾದ ಕ್ಷೇತ್ರಗಳಲ್ಲಿ ಮಕ್ಕಳ ಹೊಂದಿರುವ ಆಸಕ್ತಿ ಮತ್ತು ಅವರ ಪ್ರತಿಭೆಯ ಅನಾವರಣಕ್ಕೆ ಕಾರ‌್ಯಕ್ರಮ ಸಾಕ್ಷಿಯಾಯಿತು. ವೀರಗಾಸೆ, ಕಂಸಾಳೆ,ಕೋಲಾಟ, ಜಾನಪದ ಹಾಗೂ ಚಿತ್ರಗೀತೆಗಳಿಗೆ ನೃತ್ಯ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳು ನೋಡುಗರ ಮನ ರಂಜಿಸಿದವು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಬೆಂಕಿಯಲ್ಲಿ ಅರಳಿದ ಹೂವು ನಾಟಕ ಪ್ರದರ್ಶಸಿದರು. ಕಾರ್ಯಕ್ರಮದಲ್ಲಿ ಭಾ ಗವಹಿಸಿದ ಎಲ್ಲ ತಂಡಗಳನ್ನು ಪ್ರಶಸ್ತಿ ಪತ್ರ,ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ,ಸಿಡಿಪಿಒ ಪವಿತ್ರಾ,ನಿರೂಪಣಾಧಿಕಾರಿ ವಿಜಯಕ್‌ಕುಮಾರ್,ಜಿಲ್ಲಾ ಅಂಗವಿಕಲ ಅಭಿವೃದ್ಧಿ ಅಧಿಕಾರಿ ವೀಣಾ,ಶಿಕ್ಷಕರಾದ ಕುಮಾರ್,ಹೊನ್ನಪ್ಪ ಮತ್ತಿತರರು ಇದ್ದರು.