ಜಿಲ್ಲೆ

ಚಿಣ್ಣರ ನೃತ್ಯಕ್ಕೆ ಮನಸೋತ ಕಲಾ ಪ್ರೇಮಿಗಳು

ಬಳ್ಳಾರಿ : ಇಲ್ಲಿನ ಡಾ.ರಾಜ್‍ಕುಮಾರ್ ರಸ್ತೆಯ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದ ಸಾಂಸ್ಕೃತಿಕ ಸಮುಚ್ಛಯದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ “ತಿಂಗಳ ಸೊಬಗು” ಕಾರ್ಯಕ್ರಮ ನಡೆಯಿತು.
ಸ್ಥಳೀಯ ಮಟ್ಟದ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮಹತ್ತರ ಕಾರ್ಯ ಕೈಗೊಂಡಿದೆ. ಜಿಲ್ಲೆಯ ಸಾಂಸ್ಕ್ರತಿಕ ಇತಿಹಾಸವನ್ನು ಸಾರುವ ಕಾರ್ಯವು ಸಾರ್ವಜನಿಕರ ಅಚ್ಚುಮೆಚ್ಚಾಗುತ್ತಿದೆ.
ಕಾರ್ಯಕ್ರಮದಲ್ಲಿ ಸೂರ್ಯ ಕಲಾ ಟ್ರಸ್ಟ್ ನ ಸಾಂಸ್ಕೃತಿಕ ನೃತ್ಯ ನೋಡುಗರ ಕಣ್ಮನ ಸೆಳೆಯಿತು. ಯರಿಸ್ವಾಮಿ ಅವರ ಹಾಸ್ಯ ಚಟಾಕಿಗೆ ನೆರೆದಿದ್ದವರು ನಗೆಗಡಲಲ್ಲಿ ತೇಲಾಡಿದರು.
ಬಳ್ಳಾರಿಯ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಸುಗಮ ಸಂಗೀತವು ಕೇಳುಗರ ಕಿವಿ ತಂಪಾಗಿಸುತ್ತಿತ್ತು ಹಾಗೂ ಸೂರ್ಯ ಕಲಾ ಟ್ರಸ್ಟ್ ನ ಚಿಣ್ಣರ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನರಂಜನೆಗೆ ಪಾತ್ರವಾಯಿತು. ಸಾರ್ವಜನಿಕರಿಗೆ ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು.