ಜಿಲ್ಲೆ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಿಸಲಿ

ಚಿಕ್ಕೋಡಿ: ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಪಟ್ಟಣದ ಉಪ ವಿಭಾಗಾಧಿಕಾರಿ ಕಚೇರಿ ಎದುರಿಗೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ವಕೀಲರ ಸಂಘದ ಪದಾಧಿಕಾರಿಗಳು ಗುರುವಾರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಕೀಲರಾದ ಬಿ.ಆರ್.ಯಾದವ, ಎಸ್.ಆರ್.ವಾಲಿ ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ದಶಕಗಳಿಂದ ಹೋರಾಟ ನಡೆದಿದೆ. ಈ ಭಾಗದ ಜನರಿಗೆ ಅಭಿವೃದ್ಧಿ ಕಾರ್ಯಗಳು ಕನಸಾಗಿಯೇ ಉಳಿದಿವೆ. ಹೀಗಾಗಿ, ಚಿಕ್ಕೋಡಿ ಜಿಲ್ಲೆಯಾದರೆ ಮಾತ್ರ ಅಭಿವೃದ್ಧಿ ಕನಸು ನನಸಾಗಲು ಸಾಧ್ಯವಾಗುತ್ತದೆ. ಕೂಡಲೇ ಬೆಳಗಾವಿಯ ಅಧಿವೇಶನದಲ್ಲಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಘೋಷಿಸಬೇಕೆಂದು ಆಗ್ರಹಿಸಿದರು. ಎಸ್.ಆರ್.ವಾಲಿ, ಪಿ.ಆರ್.ಕೋಂಕನೆ, ಎಂ.ಎಸ್.ಈಟಿ ಮಾತನಾಡಿದರು.

ವಕೀಲರ ಸಂಘದ ಎಚ್.ಎಸ್.ನಸಲಾಪುರೆ, ಎಸ್.ಎಲ್.ಯರನಾಳೆ, ಮೋಹನ ಮೋಟಣ್ಣವರ, ರವಿ ಹುದ್ದಾರ, ಬಿ.ಎನ್.ಪಾಟೀಲ, ಮಹಾದೇವ ಭೆಂಡವಾಡೆ, ಎಂ.ಆರ್.ಸಗರೆ, ವಿನೋದ ಪಾಟೀಲ, ಅರುಣ ಬೋಳಾಜ, ಎಂ.ಕೆ.ಪೂಜೇರಿ, ಎ.ಎ.ಚೌಗಲಾ, ಡಿ.ಆರ್.ಕೋಟ್ಯಾಪ್ಪಗೋಳ, ರವಿ ಹಿರೆಕೋಡಿ, ಅಶೋಕ ಹರಗಾಪುರೆ, ಎಸ್.ವೈ.ಪಾಟೀಲ ಇತರರಿದ್ದರು.