ರಾಯಬಾಗ: ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ಪಟ್ಟಣದ ವಕೀಲರು ತಹಸೀಲ್ದಾರ್ ಕಚೇರಿ ಬಂದ್ ಮಾಡಿ ಶುಕ್ರವಾರ ಪ್ರತಿಭಟಿಸಿದರು.
ಬುಧವಾರ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಕಚೇರಿಯಲ್ಲಿ ನಡೆದ ರಾಯಬಾಗ ವಕೀಲರ ಪ್ರಕರಣವೊಂದರ ವಿಚಾರಣೆ ವೇಳೆ ಎಸಿ ಅವರು ವಕೀಲರ ಜತೆ ಅನುಚಿತವಾಗಿ ವರ್ತಿಸಿದಲ್ಲದೆ, ಪೊಲೀಸರನ್ನು ಕರೆದು ಬಂಧಿಸಲು ಮುಂದಾಗಿರುವ ವರ್ತನೆ ಇಡಿ ವಕೀಲರ ಸಮುದಾಯಕ್ಕೆ ಅಗೌರವ ಮಾಡಿದಂತಾಗಿದ್ದು, ಅವರನ್ನು ತಕ್ಷಣ ವರ್ಗಾಯಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೇಲಧಿಕಾರಿಗಳು ವಕೀಲರನ್ನು ಅಗೌರವದಿಂದ ಕಾಣುತ್ತಿರುವ ಬೆಳವಣಿಗೆ ಪದೇ ಪದೆ ಮರುಕಳುಹಿಸುತ್ತಿದ್ದು, ಚಿಕ್ಕೋಡಿ ಉಪವಿಭಾಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸುವವರೆಗೆ ಹಾಗೂ ವಕೀಲರಿಗೆ ನ್ಯಾಯ ದೊರಕುವವರಿಗೆ ತಹಸೀಲ್ದಾರ್ ಕಚೇರಿ ಎದುರು ಕುಳಿತು ಅರ್ನಿದಿಷ್ಟ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮುಷ್ಕರ ನಿರತ ವಕೀಲರನ್ನು ಸಮಾಧಾನಪಡಿಸಲು ತಹಸೀಲ್ದಾರ್ ಸುರೇಶ ಮುಂಜೆ ಪ್ರಯತ್ನಿಸಿದರೂ, ಅವರ ಮನವಿಗೆ ಮಣಿಯದೆ ವಕೀಲರು ಸಂಜೆವರೆಗೂ ಎಸಿ ವಿರುದ್ಧ ೂಷಣೆ ಕೂಗಿದರು. ಸಿಪಿಐ ಎಚ್.ಡಿ.ಮುಲ್ಲಾ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ವಕೀಲರ ಸಂದ ತಾಲೂಕಾಧ್ಯ ಆರ್.ಎಚ್.ಗೊಂಡೆ, ಉಪಾಧ್ಯ ಎಂ.ಎಂ.ಚಿಂಚಲಿಕರ, ಕಾರ್ಯದರ್ಶಿ ಆರ್.ಎಸ್.ಹೊಳೆಪ್ಪಗೋಳ, ವಿ.ಎ.ಮೋರೆ, ವಿ.ಜಿ.ಖವಟಕೊಪ್ಪ, ಆರ್.ಎಸ್.ಶಿರಗಾಂವೆ, ಬಿ.ಎಸ್.ಗಡ್ಡೆ, ಎಲ್.ಆರ್.ಪಡತರೆ, ವಿ.ಎಸ್.ಪೂಜಾರಿ, ಎಸ್.ಬಿ.ಹೊಳ್ಕರ, ಟಿ.ಕೆ.ಶಿಂಧೆ, ಎನ್.ಎಂ.ಯಡವನ್ನವರ, ಆರ್.ಎ.ಗೆನ್ನೆನವ್ವರ, ಜಿ.ಎಸ.ಖಿಚಡೆ, ಬಿ.ಎಸ್.ಪಾಟೀಲ, ಎ.ಬಿ.ದಪ್ಪಾದುಳೆ ಇತರರಿದ್ದರು.