ಜಿಲ್ಲೆ

ಚಿಕ್ಕಮುಲಗೂಡು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮಳವಳ್ಳಿ: ತಾಲೂಕಿನ ಚಿಕ್ಕಮುಲಗೂಡು ಗ್ರಾಮ ಪಂಚಾಯಿತಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿ.ಮಾದೇಶ್, ಉಪಾಧ್ಯಕ್ಷರಾಗಿ ಮಹಾದೇವಮ್ಮ ಚುನಾಯಿತರಾದರು.


ಒಟ್ಟು 17 ಸದಸ್ಯರಿರುವ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಮಾದೇಶ ಹಾಗೂ ಮಹಾಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದರು. ಸಿ.ಮಾದೇಶ 9 ಮತಗಳನ್ನು ಪಡೆದು ವಿಜೇತರಾದರೆ ಮಹಾಲಕ್ಷ್ಮೀ 8 ಮತಗಳನ್ನು ಪಡೆದರು.


ಉಪಾಧ್ಯಕ್ಷ ಸ್ಥಾನಕ್ಕೆ ಮಹಾದೇವಮ್ಮ, ನಾಗಮ್ಮ ನಾಮಪತ್ರ ಸಲ್ಲಿಸಿದ್ದರು. ಮಹಾದೇವಮ್ಮ 10 ಮತ ಪಡೆದು ಚುನಾಯಿತರಾದರೆ, ನಾಗಮ್ಮ 7 ಮತಗಳನ್ನು ಗಳಿಸಿದರು. ಚುನಾವಣಾ ಅಧಿಕಾರಿಯಾಗಿ ಸಿಡಿಪಿಒ ದೀಪಾ ಕಾರ್ಯನಿರ್ವಹಿಸಿದರು.


ಮುಖಂಡರಾದ ಸಿ.ಎಂ.ಪುಟ್ಟಬುದ್ಧಿ , ಶಿವನಾಗಯ್ಯ, ಬಸವರಾಜು, ರುದ್ರಯ್ಯ, ಸತೀಶ, ನಂಜರಾಜೇ ಅರಸು, ದಾಸೇಗೌಡ ಇತರರಿದ್ದರು.

.