ಜಿಲ್ಲೆ

ಚಿಕ್ಕಪ್ಪನಹಳ್ಳಿ ಕೊಟ್ರಸ್ವಾಮಿ ರಥೋತ್ಸವ 30ಕ್ಕೆ

ಚಿತ್ರದುರ್ಗ: ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಶ್ರೀಗುರು ಕೊಟ್ರಸ್ವಾಮಿ ರಥೋತ್ಸವ ಏ. 30ರಂದು ಬೆಳಗ್ಗೆ 10ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ರಥೋತ್ಸವದ ನಂತರ ಮಧ್ಯಾಹ್ನ 2ಕ್ಕೆ ಓಕಳಿ ಸೇವೆ, 3ಕ್ಕೆ ಸ್ವಾಮಿಯ ಗಂಗಾಪೂಜೆ ನೆರವೇರಲಿದೆ. ನಂತರ ಪಲ್ಲಕ್ಕಿ ಉತ್ಸವದೊಂದಿಗೆ ದೇಗುಲಕ್ಕೆ ಕರೆತರುವ ಕಾರ್ಯಕ್ರಮ.

ರಥೋತ್ಸವದ ಮುನ್ನಾ ದಿನ ಏ.29ರಂದು ಬೆಳಗ್ಗೆ 10ಕ್ಕೆ ರುದ್ರಾಭಿಷೇಕ, ಇಷ್ಟಲಿಂಗ ಮಹಾಪೂಜೆ, ಸಂಜೆ 4ಕ್ಕೆ ಕೋಣಂದೂರು ಪುರ ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಾದಪೂಜೆ ಮತ್ತು ಆಶೀರ್ವಚನ ಇರಲಿದೆ. ಸಂಜೆ 7ಕ್ಕೆ ಗಣಾರಾಧನೆ, ಸಾಮೂಹಿಕ ದಾಸೋಹ ಸೇವೆ ನಡೆಯಲಿದೆ.