ಗುಂಡ್ಲುಪೇಟೆ: ಗುಂಡ್ಲು ನದಿ ಪುನಶ್ಚೇತನ ಅಭಿಯಾನದ ಅಂಗವಾಗಿ ಗುಂಡ್ಲು ಪರಿಸರ ಬಳಗದ ಸದಸ್ಯರು ಪಟ್ಟಣದ ಚಿಕ್ಕಕೆರೆಯಲ್ಲಿ ಮೂರನೇ ಭಾನುವಾರ ಶ್ರಮದಾನ ಮಾಡಿದರು.
ಕಳೆದ 25 ವರ್ಷಗಳಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆಗೆ ನೀರು ಬರದೆ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲು ಪರಿಸರ ಬಳಗದ ಸಮಾನ ಮನಸ್ಕರು ಪ್ರತಿ ಭಾನುವಾರ ಶ್ರಮದಾನದ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ.
ಭಾನುವಾರ ಕೆರೆಯ ಕಲ್ಲಿನ ಸೋಪಾನ ಹಾಗೂ ತೂಬಿನ ಬಳಿ ಬೆಳೆದಿದ್ದ ಗಿಡಂಗಂಟಿಗಳನ್ನು ತೆರವು ಮಾಡಲಾಗಿದೆ. ಪ್ರತಿ ವಾರವೂ ವಿವಿಧ ಪ್ರದೇಶಗಳ ಹೆಚ್ಚಿನ ಯುವಕರು ಕೈಜೋಡಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಶ್ರಮದಾನಿಗಳ ಅಗತ್ಯವಿದೆ ಎಂದು ಬಳಗದ ನಾಗಾರ್ಜುನ ಕುಮಾರ್ ಹೇಳಿದ್ದಾರೆ.
ಇಂದಿನ ಶ್ರಮದಾನದಲ್ಲಿ ನಾಗಾರ್ಜುನಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ತಾಲೂಕು ಅಧ್ಯಕ್ಷ ವಿ.ನಾ. ಚಿದಾನಂದಸ್ವಾಮಿ, ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೃಷ್ಣಮೂರ್ತಿ ಚಮರಂ, ಪರಿಸರಪ್ರೇಮಿ ರಾಘವೇಂದ್ರ, ಕರುನಾಡ ಯುವಶಕ್ತಿ ಸಂಘಟನೆಯ ಈಶ್ವರ್, ಮುನೀರ್, ಪ್ರಣವ್, ಸಚಿನ್ ಸೇರಿದಂತೆ ಹಲವರು ಇದ್ದರು.
ಗುಂಡ್ಲುಪೇಟೆ ಗುಂಡ್ಲು ಪರಿಸರ ಬಳಗದ ಸದಸ್ಯರು ಪಟ್ಟಣದ ಚಿಕ್ಕಕೆರೆಯಲ್ಲಿ ಮೂರನೇ ಭಾನುವಾರ ಶ್ರಮದಾನ ಮಾಡಿದರು.