ಬೀದರ್: ನಗರದ ಮೋಹನ್ ಮಾರ್ಕೆಟ್ ನಲ್ಲಿರುವ ಗುದಗೆ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಗುದಗೆ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ (ಐವಿಎಫ್) ಶುರುವಾಗಿದೆ. ಬಂಜೆತನದಿಂದ ಬಳಲುವ ಜಿಲ್ಲೆ ಜನರಿಗೆ ಕಮ್ಮಿ ಖರ್ಚಿನಲ್ಲಿಯೇ ಸ್ಥಳೀಯವಾಗಿ ಅತ್ಯುತ್ತಮ ಚಿಕಿತ್ಸೆ ನೀಡಿ ಮಕ್ಕಳನ್ನು ಪಡೆವ ನಿಟ್ಟಿನಲ್ಲಿ ಕೇಂದ್ರ ಆರಂಭಿಸಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆ ವೈದ್ಯ ಕ್ಷೇತ್ರದಲ್ಲಿ ಗುದಗೆ ಹಸರು ಬ್ರ್ಯಾಂಡ್ ಆಗಿದೆ. ಡಾ.ಚಂದ್ರಕಾಂತ ಗುದಗೆ ಅವರು ನಾಲ್ಕು ದಶಕದಿಂದ ಈ ಭಾಗದ ಜನರ ಉತ್ತಮ ಆರೋಗ್ಯಕ್ಕೆ ಶ್ರಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್, ಎನ್ಐಸಿಯು ಸೇರಿದಂತೆ ವಿವಿಧ ಸೇವೆ ಒದಗಿಸುತ್ತಿದ್ದಾರೆ. ಮಕ್ಕಳಿಲ್ಲ ಎಂದು ಕೊರುಗವವರ ನೋವು ನಿವಾರಿಸಲು ಈಗ ಟೆಸ್ಟ್ ಟ್ಯೂಬ್ ಬೇಬಿ ಕೇಂದ್ರ ಆರಂಭಿಸಿದ್ದಾರೆ. ಬಂಜೆತನ ಸಮಸ್ಯೆ ಇದ್ದವರಿಗೆ ಇದು ವರದಾನವಾಗಲಿದೆ ಎಂದರು.
ಶಾಸಕರಾದ ರಾಜಶೇಖರ ಪಾಟೀಲ್, ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಡಾ. ಗುದಗೆ ಅವರ ಸೇವೆ ವಿಶಿಷ್ಟ. ರೋಗಿಗಳಿಗೆ ಸೌಜನ್ಯದಿಂದ ವರ್ತಿಸಿ ಆಪ್ತ ಸಮಾಲೋಚನೆ ನಡೆಸಿ ಸಮಸ್ಯೆಗೆ ಸ್ಪಂದಿಸುವ ಸ್ವಭಾವ ಮೆಚ್ಚುವಂಥದ್ದು ಎಂದರು.
ಎನ್.ಬಿ.ರೆಡ್ಡಿ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಗುದಗೆ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಚಂದ್ರಕಾಂತ ಗುದಗೆ ಸ್ವಾಗತಿಸಿದರು. ಡಾ.ಸಚಿನ್ ಗುದಗೆ ವಂದಿಸಿದರು. ಐವಿಎಫ್ ಸೆಂಟರ್ ಮುಖ್ಯಸ್ಥೆ ಡಾ.ಶಾರದಾ ಗುದಗೆ ಚಿಕಿತ್ಸೆ ಹೇಗಿರುತ್ತದೆ ಎಂಬುದು ವಿವರಿಸಿದರು. ಆಸ್ಪತ್ರೆ ನಿರ್ದೇಶಕಿ ನಂದಾ ಗುದಗೆ, ಹಿರಿಯರಾದ ಬಾಬುರಾವ ಗುದಗೆ, ಡಾ. ನಿತಿನ್ ಗುದಗೆ, ಡಾ. ವಿಜಯಲಕ್ಷ್ಮೀ ಗುದಗೆ, ಡಾ. ಮಹೇಶ ತೊಂಡಾರೆ, ಡಾ.ವರ್ಷಾ ತೊಂಡಾರೆ, ಡಾ.ವಿಶ್ವನಾಥ ಪಾಟೀಲ್, ಡಾ.ಸಂಗಮೇಶ ತೊಂಡಾರೆ, ಡಾ.ನಾಗರಾಜ ಮಿತ್ರಾ, ಡಾ. ವೈಭವ ಭದಭದೆ, ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಸೋಲಪೂರ ಇದ್ದರು.