ಕಲಬುರಗಿ: ಕರೊನಾ ಸೋಂಕಿತ ಹೊರತು ಪಡಿಸಿ ಜಿಲ್ಲಾ ಆಸ್ಪತ್ರೆಗೆ (ಜಿಮ್ಸ್) ಬರುವ ಇತರೆ ರೋಗಿಗಳ ಚಿಕಿತ್ಸೆಗೆ ಹತ್ತು ಆಸ್ಪತ್ರೆಗಳಲ್ಲಿ ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಎ. ಜಬ್ಬಾರ್ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯನ್ನು ಈಗ ಕೋವಿಡ್-19 ಚಿಕಿತ್ಸಾ ಆಸ್ಪತ್ರೆ ಎಂದು ಗುರುತಿಸಲಾಗಿದ್ದು, ಕರೊನಾ ಶಂಕಿತ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತಿದೆ. ಜಿಮ್ಸ್ ಆಸ್ಪತ್ರೆಗೆ ಬರುವ ಇತರೆ ರೋಗಗಳ ಚಿಕಿತ್ಸೆಗೆ ಆಯುಷ್ಮಾನ್ ಭಾರತ್-ಆರೋಗ್ಯ ಕನರ್ಾಟಕ ಯೋಜನೆಯಡಿ ನೋಂದಾಯಿತ ನಗರದ 10 ಆಸ್ಪತ್ರೆಗಳಲ್ಲಿ ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆ ಪಡೆಯಬಹುದಾಗಿದೆ.
ನಗರದ ಸಂತ್ರಾಸವಾಡಿಯ ಮೆಡಿಕೇರ್ ಆಸ್ಪತ್ರೆ (98 ಬೆಡ್), ಜೆಸ್ಕಾಂ ಕಚೇರಿ ಹಿಂಬದಿಯ ಚಿರಾಯು ಆಸ್ಪತ್ರೆ (60 ಬೆಡ್), ಸ್ಟೇಷನ್ ರಸ್ತೆಯಲ್ಲಿರುವ ಯುನೈಟೆಡ್ ಆಸ್ಪತ್ರೆ (100 ಬೆಡ್), ಸಕರ್ಾರಿ ಐ.ಟಿ.ಐ. ಕಾಲೇಜ್ ರಸ್ತೆಯಲ್ಲಿರುವ ಕಾಮರೆಡ್ಡಿ ಆಸ್ಪತ್ರೆ (30 ಬೆಡ್), ಎನ್.ವಿ. ಮೈದಾನ ರಸ್ತೆಯ ಚಿರಂಜೀವಿ ಆಸ್ಪತ್ರೆ (25 ಬೆಡ್), ಖರ್ಗೆ ಪೆಟ್ರೋಲ್ ಪಂಪ್ ರಸ್ತೆಯಲ್ಲಿರುವ ಅನ್ವಿಕಾ ಆಸ್ಪತ್ರೆ (30 ಬೆಡ್), ಸೇಡಂ ರಸ್ತೆಯಲ್ಲಿರುವ ಬಸವೇಶ್ವರ ಬೋಧಕ ಆಸ್ಪತ್ರೆ (1,000 ಬೆಡ್), ಉಪ ಅರಣ್ಯಾ ಸಂರಕ್ಷಣಾಧಿಕಾರಿಗಳ ಕಚೇರಿ ಎದುರಿಗಿರುವ ಸತ್ಯಾ ಯುರೋಕೇರ್ ಆಸ್ಪತ್ರೆ (80 ಬೆಡ್), ಆರ್.ಟಿ.ಓ ಕಚೇರಿ ಬಳಿಯಿರುವ ವಾತ್ಸಲ್ಯ ಆಸ್ಪತ್ರೆ (70 ಬೆಡ್) ಹಾಗೂ ಸ್ಟೇಷನ್ ರಸ್ತೆಯಲ್ಲಿರುವ ಕೆ.ಬಿ.ಎನ್. ಆಸ್ಪತ್ರೆ (540 ಬೆಡ್) ಗುರುತಿಸಲಾಗಿದೆ. ಇಲ್ಲಿ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ಕ್ರಮಗಳು ಲಭ್ಯವಿರುತ್ತವೆ ಎಂದು ಡಾ.ಜಬ್ಬಾರ್ ತಿಳಿಸಿದ್ದಾರೆ.
ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸಾ ಕ್ರಮಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಒದಗಿಸಬೇಕೆಂದು ಸರ್ಕಾರದ ಆದೇಶವಿದ್ದರೂ, ಆರೋಗ್ಯ ತುರ್ತು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಿಯಮ ಸಡಿಲಿಸಿ, ನೇರವಾಗಿ ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಪಡಿತರ ಚೀಟಿ, ಆಧಾರ್ ಕಾರ್ಡ ತೋರಿಸಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪಡಿತರ ಚೀಟಿ ಇಲ್ಲದ ರೋಗಿಗಳೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ಇರಲಿದೆ. ಇಂತಹ ರೋಗಿಗಳಿಗೆ ಚಿಕಿತ್ಸೆ ಒದಗಿಸಿದ ಸಂದರ್ಭದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಯವರು ರೋಗಿಗಳ ಚಿಕಿತ್ಸಾ ದಾಖಲೆಗಳನ್ನು ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕರಿಗೆ ಸಲ್ಲಿಸಿ, ಜಿಲ್ಲೆಯ ಆರೋಗ್ಯ ರಕ್ಷಾ ಸಮಿತಿಯಿಂದ ಹಣ ಮರುಪಾವತಿ ಮಾಡಿಕೊಳ್ಳಬೇಕು.
ಸಂಕೀರ್ಣ ದ್ವಿತೀಯ ಹಂತದ ಮತ್ತು ತೃತೀಯ ಹಂತದ ಕಾಯಿಲೆಯ ರೋಗಿಗಳು ತಾಲೂಕಾ ಅಥವಾ ಜಿಲ್ಲಾ ಆಸ್ಪತ್ರೆಯಿಂದ ರೆಫರಲ್ ಪಡೆದುಕೊಂಡೆ ಈ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳವುದು ಅನಿವಾರ್ಯ. ಸಾರ್ವಜನಿಕರು ಮತ್ತು ರೋಗಿಗಳು ಇದರ ಸೌಲಭ್ಯ ಪಡೆಯಲು ಮನವಿ ಮಾಡಿದ್ದಾರೆ.