ಅರಕಲಗೂಡು: ತಾಲೂಕಿನ ಬೈಚನಹಳ್ಳಿ ಗ್ರಾಮದ ಚಿಕಿತ್ಸೆ ಸಿಗದೆ ಜಾನುವಾರುಗಳು ಮೃತಪಡುತ್ತಿವೆ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪಶು ಆಸ್ಪತ್ರೆ ಮುಂದೆ ಸತ್ತ ಕರುವಿನ ಕಳೇಬರ ಇಟ್ಟು ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ಪಶು ವೈದ್ಯರ ಕೊರತೆಯಿಂದ ಸೂಕ್ತ ಚಿಕಿತ್ಸೆ ಸಿಗದೆ ಅನಾರೋಗ್ಯಕ್ಕೀಡಾದ ಜಾನುವಾರುಗಳು ಅಸುನೀಗುತ್ತಿವೆ. ಇದರಿಂದಾಗಿ ಜಾನುವಾರು ಸಾಕಿರುವ ರೈತರು ಅಪಾರ ನಷ್ಟ ಅನುಭವಿಸುವಂತಾಗಿದೆ. ಚಿಕಿತ್ಸೆ ಸಿಗದೆ ಯೋಗೇಶ್ ಎಂಬುವರ ಕರು ಮೃತಪಟ್ಟಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕರುವಿಗೆ ಆರೋಗ್ಯ ಸರಿಯಿಲ್ಲದೆ ಒದ್ದಾಟ ನಡೆಸುತ್ತಿದ್ದ ವೇಳೆ ಪಶು ವೈದ್ಯರಿಗೆ ಕರೆ ಮಾಡಿದರೂ ಸ್ಥಳಕ್ಕೆ ಬರಲಿಲ್ಲ. ಆಸ್ಪತ್ರೆಯಲ್ಲಿ ರೈತರ ಗೋಳು ಕೇಳುವವರೇ ಇಲ್ಲವಾಗಿದ್ದಾರೆ ಎಂದು ಗ್ರಾಮದ ಮನು ಆರೋಪಿಸಿದರು.