ಜಿಲ್ಲೆ

ಚಿಂದಿ ಹಾಯುವ ನೆಪದಲ್ಲಿ ಕಂಚಿನ ಗಣೇಶ ಮೂರ್ತಿಗೂ ಕನ್ನ !

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ನಸುಕಿನ ಜಾವ ಚಿಂದಿ ಹಾಯುವ ನೆಪದಲ್ಲಿ ಬರುವ ಕೆಲ ಮಹಿಳೆಯರು ಕೈಗೆ ಸಿಕ್ಕ ವಸ್ತುಗಳನ್ನು ದೋಚಿಕೊಂಡು ಪರಾರಿ ಆಗುತ್ತಿದ್ದಾರೆ. ಇದರಿಂದ ಅಂಗಡಿ-ಮುAಗಟ್ಟು ಹಾಗೂ ಕಟ್ಟಡ ನಿರ್ಮಾಣ ಮಾಡಿಸುತ್ತಿರುವ ಜನರಿಗೆ ಇನ್ನಿಲ್ಲದ ತೊಂದರೆ ಆಗುತ್ತಿದೆ.

ಇತ್ತೀಚಿಗೆ ಈ ಕಳ್ಳತನದ ಹಾವಳಿ ಹೆಚ್ಚಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಚಿಂದಿ ಹಾಯಲು ಬಂದಿದ್ದ ಮಹಿಳೆಯೊಬ್ಬರು ಕಾಂಪ್ಲೆಕ್ಸ್ ಒಂದರಲ್ಲಿ ವ್ಯಾಪಾರಸ್ಥರಿಗೆ ಪೂಜೆ ಮಾಡಲು ಇಟ್ಟಿದ್ದ ಕಂಚಿನ ಗಣೇಶ ಮೂರ್ತಿಯನ್ನು ಸಹ ಚೀಲದಲ್ಲಿ ಹಾಕಿಕೊಂಡು ಬಿಂದಾಸ್ ಆಗಿ ಹೊರ ಬಂದಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಈ ದೃಶ್ಯ ನೋಡಿದರೆ ಕನಸುಗಾರ ಚಿತ್ರದಲ್ಲಿ ಗುಡಿಯಲ್ಲಿ ಗಣೇಶ ಮೂರ್ತಿಯನ್ನು ಕಳ್ಳತನ ಮಾಡಿಕೊಂಡು ಗೋಣಿ ಚೀಲದಲ್ಲಿ ಹಾಕಿಕೊಂಡು ಹೋಗುವ ಸನ್ನಿವೇಶ ಹೋಲುತ್ತದೆ. ಚಿತ್ರದಲ್ಲಿ ಕಳ್ಳರನ್ನು ಹಿಡಿಯಲು ಭಕ್ತರು ಬೆನ್ನಟ್ಟಿ ಹೋಗುತ್ತಾರೆ. ಆದರೆ, ವಿದ್ಯಾಗಿರಿಯ ಕಾಂಪ್ಲೆಕ್ಸ್ನಲ್ಲಿ ಬೆಳಗ್ಗೆ ಯಾರೂ ಇಲ್ಲದ್ದರಿಂದ ಕಂಚಿನ ಗಣೇಶ ಮೂರ್ತಿಯನ್ನು ಅಡೆತಡೆ ಇಲ್ಲದೇ ಮಹಿಳೆ ಕಳ್ಳತನ ಮಾಡಿಕೊಂಡು ಹೋಗಿದ್ದಾಳೆ.

ಇದು ಒಂದು ಉದಾರಹಣೆ ಅಷ್ಟೆ. ಇಂತ ಅನೇಕ ಕಳ್ಳತನದ ಪ್ರಕರಣಗಳು ನಿತ್ಯ ನಡೆಯುತ್ತಿವೆ. ಮನೆಯಲ್ಲಿ ಯಾರು ಇಲ್ಲದಿರುವುದು ಹಾಗೂ ನಸುಕಿನ ಜಾವ ಬೀಗ ಹಾಕಿರುವ ಅಂಗಡಿ ಮುಂಗಟ್ಟುಗಳ ಬೀಗ ಒಡೆದು ಸ್ಟೀಲ್, ವೈರ್ ಬಂಡಲ್‌ಗಳನ್ನು ಸಹ ಚಿಂದಿ ತುಂಬುವ ಚೀಲದಲ್ಲಿ ಇಟ್ಟುಕೊಂಡು ಏನು ಮಾಡಿಲ್ಲ ಎನ್ನುವಂತೆ ಹೋಗುವ ಕೆಲ ದೃಶ್ಯಗಳು ಸಹ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಬಾಗಲಕೋಟೆ, ವಿದ್ಯಾಗಿರಿ, ನವನಗರ ಎಲ್ಲ ಕಡೆಗೂ ಈ ಕಳ್ಳತನದ ಹಾವಳಿ ಹೆಚ್ಚಾಗಿದೆ. ಇನ್ನು ಕಟ್ಟಡ ಕಾಮಗಾರಿ ನಡೆದಿರುವ ಪ್ರದೇಶದಲ್ಲಿ ಕಬ್ಬಿಣದ ವಸ್ತುಗಳನ್ನು ಅನಾಯಾಸವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿ ರಕ್ಷಣೆಯೇ ಇಲ್ಲವಾಗಿದೆ. ಇದೀಗ ಮುಂದುವರೆದು ಅಂಗಡಿ, ಮುಂಗಟ್ಟುಗಳ ಬೀಗ ಮುರಿದು ಒಳಗೆ ಹೋಗಿ ವಸ್ತುಗಳನ್ನು ದೋಚಲು ಆರಂಭಿಸಿದ್ದಾರೆ.

ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಕ್ಕೂ ಬರುವ ಮುನ್ನವೇ ಈ ಕಳ್ಳರ ಜಾಲ ನಸುಕಿನ ಜಾವದಲ್ಲೆ ತಮ್ಮ ಕಾರ್ಯಾಚರಣೆ ಆರಂಭಿಸಿ, ಬೆಳಗ್ಗೆ ೭-೮ ಗಂಟೆಯಷ್ಟೊತ್ತಿಗೆ ಕಬ್ಬಿಣ, ವೈರ್, ಪಾತ್ರೆ, ಪಗಡೆಗಳನ್ನು ತೆಗೆದುಕೊಂಡು ಕಾಲ್ಕಿಳುತ್ತಿದ್ದಾರೆ. ಅನೇಕರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗುತ್ತಿಲ್ಲ. ಇನ್ನು ಪೊಲೀಸರ ಗಮನಕ್ಕೆ ತಂದರೂ ಅವರು ಎ-ï‌ಐಆರ್ ಮಾಡದೇ ಕಳ್ಳರನ್ನು ಪತ್ತೆ ಮಾಡುತ್ತೇವೆ, ನಿಮ್ಮ ವಸ್ತು ಕೊಡೆಸುತ್ತೇವೆ ಎಂದು ಸಾಗಹಾಕುತ್ತಾರೆ ಎಂದು ಜನರು ಆರೋಪಿಸುತ್ತಾರೆ.

ಇದೀಗ ವಿದ್ಯಾಗಿರಿ ೧೭ನೇ ಕ್ರಾಸ್‌ನ ಕಾಂಪ್ಲೆಕ್ಸ್ನ ಒಳಗಡೆ ನುಗ್ಗಿದ ಮಹಿಳೆಯೊಬ್ಬರು ಕಂಚಿನ ಗಣೇಶ ಮೂರ್ತಿಯನ್ನು ಎತ್ತಿಕೊಂಡು ಹೋಗುವ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಇದನ್ನು ಪೊಲೀಸರಿಗೆ ತೋರಿಸಿದ್ದಲ್ಲದೇ ಅವರು ಸಹ ಪುಟೇಜ್ ತೆಗೆದುಕೊಂಡು ಹೋಗು ಮರ‍್ನಾಲ್ಕು ದಿನಗಳಾದರೂ ಇನ್ನೂ ದೇವರ ಮೂರ್ತಿ ಪತ್ತೆ ಆಗಿಲ್ಲ. ಈ ಕುರಿತು ಎ-ï‌ಐಆರ್ ಸಹ ಮಾಡಿಕೊಂಡಿಲ್ಲ. ಕೇಳಿದರೆ ಮೂರ್ತಿ ಸಿಕ್ಕ ಬಳಿಕ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆಂದು ಹೆಸರು ಹೇಳಲು ಇಚ್ಛಿಸಿದ ವ್ಯಕ್ತಿಯೊಬ್ಬರು ಹೇಳಿದರು.

ನವನಗರದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊAದರಲ್ಲಿ ಇತ್ತೀಚಿಗೆ ಇದೇ ರೀತಿ ಚಿಂದಿ ಹಾಯುವ ನೆಪದಲ್ಲಿ ಬಂದಿದ್ದ ಮಹಿಳೆಯರು ಅಲ್ಲಿನ ಸ್ಟೋರ್ ರೂಂ ಕೀಲಿ ಮುರಿದು ಒಳಗಡೆ ಇದ್ದ ವೈರ್ ಬಂಡಲ್‌ನ್ನು ಸಹ ದೋಚಿಕೊಂಡು ಹೋಗಿದ್ದಾರೆ. ಹೀಗೆ ಬಿಂದಾಸ್ ಆಗಿ ನುಗ್ಗಿ ವಸ್ತುಗಳನ್ನು ಎತ್ತಿಕೊಂಡು ಹೋಗುವ ಒಂದು ಜಾಲವೇ ಇದ್ದು, ಅವರೆಲ್ಲ ನಸುಕಿನ ಜಾವದಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಇನ್ನು ಅವರು ಮನೆಗಳಿಗೆ ನುಗ್ಗಿ ಮನೆಯವರ ಎದರೇ ವಸ್ತುಗಳನ್ನು ದೋಚಿಕೊಂಡು ಹೋದರೂ ಅಚ್ಚರಿ ಪಡುವಂತಿಲ್ಲ ಎನ್ನುತ್ತಾರೆ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಒಬ್ಬರು.