ಜಿಲ್ಲೆ

ಚಿಂತಾಮಣಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

ಚಿಂತಾಮಣಿ: ನಗರದಲ್ಲಿ ಭಾನುವಾರ ಮಧ್ಯಾಹ್ನ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆ ಸುರಿಯಿತು. ಆರಂಭದಲ್ಲಿ ಬಿರುಗಾಳಿಯೊಂದಿಗೆ ಆರಂಭವಾದ ಮಳೆ ನಂತರ ಗಾಳಿಯ ವೇಗ ಕಡಿಮೆಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಸುರಿಯಿತು. ರಸ್ತೆಗಳೆಲ್ಲ ಕೆರೆಗಳಂತೆ ಕಂಡುಬಂದವು.

ನಗರದ ರಾಜೀವನಗರ ಬಡಾವಣೆಯಲ್ಲಿ ಮರದ ಕೊಂಬೆ ಬಿದ್ದು ಗೋಪಿನಾಥ್ ಎಂಬುವವರ ಕಾರು ಜಖಂಗೊಂಡಿದೆ. ಇದರಿಂದ ವಿದ್ಯುತ್ ಸರಬರಾಜು ಸಹ ಸ್ಥಗಿತ ಗೊಂಡಿತ್ತು.

ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು, ಪಾದಚಾರಿಗಳು ಓಡಾಡಲು ಹರಸಾಹಸ ಪಡುಂತಾಯಿತು.

ಕಳೆದೊಂದು ತಿಂಗಳಿನಿಂದ ಆಗಾಗ ಮಳೆಯಾಗುತ್ತಿದ್ದು ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ನೆಮ್ಮದಿ ತಂದಿದೆ.