ಜಿಲ್ಲೆ

ಚಿಂಚೋಳಿಯಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿ ವೀಕ್ಷಣೆ

ಚಿಂಚೋಳಿ: ಪಟ್ಟಣದ ಶ್ರೀ ಹರಾಕೂಡ ಚನ್ನಬಸವ ಶಿವಯೋಗಿಗಳ ಮಠದಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಚಾಲನೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಮಾಡಲಾಯಿತು.

ತಾಲೂಕು ಆಡಳಿತ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಂಚೆ ಗೋಡೆ ಪರದೆಯ ಮೇಲೆ ಮೈಸೂರಿನ ಕಾರ್ಯಕ್ರಮವನ್ನು ಸಹಸ್ರಾರು ಮಹಿಳೆಯರು ವಿಕ್ಷಣೆ ಮಾಡಿದರು.

ಕಾಂಗ್ರೇಸ್ ಮುಖಂಡ ಸುಭಾಷ್ ರಾಠೋಡ, ಅನೀಲಕುಮಾರ ಜಮಾದಾರ, ಜಗನ್ನಾಥ ಕಟ್ಟಿ, ಡಾ.ತುಕರಾಮ ಪವಾರ್, ಹೀರಾಸಿಂಗ್ ಜಾಧವ್, ಮಧುಸೂದನ ರೆಡ್ಡಿ, ಶಿವರಾಜ್ ಪಾಟೀಲ್, ಆನಂದ ಟೈಗರ್, ಲಕ್ಷ್ಮಣ ಆವಂಟಿ, ಸುಭಾಶ್ಚಂದ್ರ ಯಂಪಳ್ಳಿ, ನರಸ್ಮಿಲು ಕುಂಬಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.