ಜಿಲ್ಲೆ

ಚಿಂಚೋಳಿ : ಸಮಾಜ ಸೇವಕ ರವಿಂದ್ರ ಭಂಟನಳ್ಳಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಕೃಷ್ಣ ಕುಲಕರ್ಣಿ

ಚಿಂಚೋಳಿ: ತಾಲೂಕಿನ ಭಂಟನಳ್ಳಿ ಗ್ರಾಮದ ಸಮಾಜ ಸೇವಕ ರವಿಂದ್ರಕುಮಾರ ಕರ್ಚಖೇಡ ಅವರಿಗೆ ಏಕತಾ ಕಲಾ ಶ್ರೀಯೋಗಿ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನ ಪೂಜ್ಯ ಶ್ರೀ ಡಾ.ಬಸವಯೋಗಿ ಗುರೂಜಿ ಅವರ ಏಕತಾ ಫೌಂಡೇಶನ್ (ರಿ)ನಿಂದ ಕೊಡಮಾಡುವ ಮಹತ್ವದ ಪ್ರಶಸ್ತಿ ಇದಾಗಿದೆ.

ಸೆ.13 ರಂದು ಯಲಹಂಕದ ಶ್ರೀಮಠದಲ್ಲಿ ನಡೆಯುವ ಸಂಸ್ಥೆಯ 5ನೇ ಸಾಧಕರ ಸಮ್ಮಿಲನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಫೌಂಡೇಶನ್ ತಿಳಿಸಿದೆ.