ಜಿಲ್ಲೆ

ಚಿಂಚೋಳಿ: ಶಿಕ್ಷಕರು ಸಾಮಾಜಿಕ ಚಟುವಟಿಕೆಗಳ ನಾವಿಕರು

ಕೃಷ್ಣ ಕುಲಕರ್ಣಿ

ಚಿಂಚೋಳಿ: ಡಾ. ಸರ್ವಪಲ್ಲಿ ರಾಧಕೃಷ್ಣನರವರ ಜೀವನ ಸಾಧನೆ ಕುರಿತು ಅವರ ಆದರ್ಶಗಳನ್ನು ಪಾಲಿಸಿ ಇಂದಿನ ಶಿಕ್ಷಕ ಸಮುದಾಯ ಆದರ್ಶ ವ್ಯಕ್ತಿತ್ವ ಬೆಳೆಸಿಕೊಂಡು ಸ್ವ ಅಧ್ಯಯನ ಮಾಡುವ ಮೂಲಕ ಮಕ್ಕಳ ಹೃದಯಕ್ಕೆ ಇಳಿದು ಪಾಠ- ಪ್ರವಚನ ಮಾಡುಬೇಕು ಎಂದು ಶ್ರೀ ಬಸವ ಮಾಚಿದೇವ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಕಾಶಿನಾಥ್ ಮಡಿವಾಳ ಹೇಳಿದರು.

ಮಿರಿಯಾಣ ಗ್ರಾಮದಲ್ಲಿರುವ ಶ್ರೀ ಪಾಪನಾಶ ವಿದ್ಯಾಮಂದಿರ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣ ಅವರ ಜನ್ಮದಿನ ನಿಮಿತ್ಯ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರಳತೆ, ತ್ಯಾಗ, ಪ್ರೀತಿ, ರೂಡಿಸಿಕೊಂಡು ಶಾಲೆಯು ವಿದ್ಯಾಮಂದಿರ ಆಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಸಮಾಜದಲ್ಲಿ ವಿವಿಧ ಉತ್ತಮ ಚಟುವಟಿಕೆಗಳಲ್ಲಿ ಭಾಗವಹಿಸಿ ಆದರ್ಶ ಸಮಾಜ ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ತೊಡಗಬೇಕು ಎಂದು ಮಾತನಾಡಿದರು.

ಶಾಲೆ ಪ್ರಧಾನ ಅಧ್ಯಾಪಕಿ ಶ್ರಾವಂತಿ ನರೇಂದ್ರ ಗೌಡ, ಅಂಬಿಕಾ ಕೆ, ಸಂಪೂರ್ಣ, ಸಪ್ನಾ ಮಠಪತಿ, ಸುಷ್ಮಾ ಮಡಿವಾಳ, ಶೋಭಾ ಸೇರಿದಂತೆ ಶಾಲಾ ಮುದ್ದು ಮಕ್ಕಳು ಇದ್ದರು.