ಜಿಲ್ಲೆ

ಚಿಂಚೋಳಿ; ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಲು ಶ್ರಮಿಸುವೆ- ಡಾ.ಶರಣಪ್ರಕಾಶ

ಚಿಂಚೋಳಿ: ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಬ್ಯಾಂಕ್ ನಡೆಯುವುದು ಸಂಕಷ್ಟದಲ್ಲಿಯು 25 ವರ್ಷ ಪೂರ್ಣಗೊಳಿಸಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಪಟ್ಟಣದಲ್ಲಿರುವ ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ 25ನೇ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸದಸ್ಯರಿಗೆ ಬೆಳ್ಳಿ ನಾಣ್ಯ ನೀಡಿರುವುದು, ಮುಂದಿನ ದಿನಗಳಲ್ಲಿ ಬಂಗಾರದ ನಾಣ್ಯಗಳು ನೀಡುವಂತಾಗಲಿ. ಗಡಿ ಕ್ಷೇತ್ರ ತನ್ನದೇ ಹಿರಿಮೆ ಹೊಂದಿದೆ. ವಿರೇಂದ್ರ ಪಾಟೀಲ್, ವೈಜನಾಥ ಪಾಟೀಲ ಅಂತಹ ನಾಯಕರನ್ನು ನಾಡಿಗೆ ನೀಡಿದ ಕೀರ್ತಿ ಸಲ್ಲುತ್ತದೆ. ಸೇಡಂ, ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದು ನುಡಿದರು.

ಕಾಂಗ್ರೇಸ್ ಪಕ್ಷವು ನುಡಿದಂತೆ ನಡೆಯುತ್ತಿದೆ. ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಡಿ ನೇರವಾಗಿ ಖಾತೆಗೆ ಹಣ ನೀಡಲಾಗುತ್ತದೆ. ಗೃಹ ಜ್ಯೋತಿ, ಇದೀಗ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಯುವ ನಿಧಿ ಡಿಸೆಂಬರ್ ತಿಂಗಳಲ್ಲಿ ಜಾರಿಗೆ ತರಲಾಗುವುದು. ಶರಣರ ಮಾರ್ಗದಲ್ಲಿ ಸಾಗುತ್ತಿರುವ ಜನಪರ ಸರಕಾರವಾಗಿದೆ. ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಚಿಂಚೋಳಿ ಸೇರಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುಂಚೆ ಸಂಸ್ಥೆ ಸಂಸ್ಥಾಪಕ ಆಡಳಿತ ಮಂಡಳಿ ಸದಸ್ಯರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆಯ ಸರ್ವ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸಿದರು.

ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಮಾಜಿ ಶಾಸಕ ಕೈಲಾಸನಾಥ ಪಾಟೀಲ್, ಪ್ರಮುಖರಾದ ಸುಭಾಷ್ ರಾಠೋಡ, ಬಾಬುರಾವ್ ಪಾಟೀಲ್, ಬಸವರಾಜ ಮಾಲಿ, ಅಶೋಕ್ ಪಾಟೀಲ್, ಮಧುಸೂದನ ರೆಡ್ಡಿ, ಬಸವಣ್ಣಪ್ಪ ಪಾಟೀಲ್, ಭೀಮರಾವ ತೇಗಲತೀಪ್ಪಿ, ಬಸಯ್ಯ ಗುತ್ತೇದಾರ, ಮಸ್ತಾನಅಲಿ ಪಟ್ಟೇದಾರ, ಸುಭಾಷ್ ಸೀಳಿನ, ನಾಗರಾಜ ಕಲಬುರ್ಗಿ, ಜಗನ್ನಾಥ ರೆಡ್ಡಿ ಪೊಂಗಾ, ಮಹಿಮೂದ ಪಟೇಲ್, ನಾಗಶೇಟ್ಟಿ ಮೈನಳ್ಳಿ, ಶರಣಮ್ಮ ಮಾಲಿ, ಮಲ್ಲಿಕಾರ್ಜುನ ಪಾಲಾಮೂರ, ಸುಭಾಶ್ಚಂದ್ರ ಯಂಪಳ್ಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.