ಜಿಲ್ಲೆ

ಚಿಂಚೋಳಿ; ಪಿಕಾರ್ಡ್ ಬ್ಯಾಂಕ್​ಗೆ ಕೈ ಮುಖಂಡ ಬಂಡಿ ನಾಮನಿರ್ದೇಶನ

ಚಿಂಚೋಳಿ: ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ನಾಮ ನಿರ್ದೇಶನ ಸದಸ್ಯರನ್ನಾಗಿ ಕಾಂಗ್ರೆಸ್​ ಮುಖಂಡ ಹಾಗೂ ನ್ಯಾಯವಾದಿ ಶ್ರೀನಿವಾಸ ಬಂಡಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬುಧವಾರ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಲಿದ್ದು, ಈ ವೇಳೆ ಬಂಡಿ ನೇಮಕ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಮತದಾನದ ಹಕ್ಕು ಪಡೆದಿದ್ದು, ಕಾಂಗ್ರೆಸ್​ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.

ಪಿಕಾರ್ಡ ಬ್ಯಾಂಕ್​ ಗದ್ದುಗೆ ಏರಲು ಕಾಂಗ್ರೇಸ್ ಮತ್ತು ಬಿಜೆಪಿ ಮಧ್ಯ ಭಾರಿ ಪೈಪೋಟಿ ಇದ್ದು, ಅಧಿಕಾರ ಯಾರಿಗೆ ಒಲಿಯಲಿದೆ ಗದ್ದುಗೆ ಎಂಬುದು ಗುರುವಾರ ಸಾಯಂಕಾಲ ಸ್ಪಷ್ಟವಾಗಲಿದೆ.