ಚಿಂಚೋಳಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಐದು ಸ್ಥಾನಕ್ಕೆ ಭಾನುವಾರ ಶಾಂತಿಯುತವಾಗಿ ಚುನಾವಣೆ ಪ್ರಕ್ರಿಯೆ ನಡೆದಿದೆ ಎಂದು ವ್ಯವಸ್ಥಾಪಕ ನಾಗಣ್ಣ ಯಲ್ದೆ ತಿಳಿಸಿದರು.
ಒಟ್ಟು 14 ಸ್ಥಾನಗಳಿದ್ದು, 9ಕ್ಕೆ ಅವಿರೋಧ ಆಯ್ಕೆ ನಡೆದಿದೆ. ಇನ್ನುಳಿದ 5 ಸ್ಥಾನಗಳಿಗೆ ಶ್ರೀನಿವಾಸ ಬಂಡಿ, ಶರಣಗೌಡ ಮುದ್ದಾ, ಶ್ರೀಹರಿ ಕಾಟಾಪುರ, ಶಬ್ಬೀರ್ ಅಹ್ಮದ್, ಶಾಮರಾವ ಧೂಳಪ್ಪ, ಚಂದ್ರಕಲಾ ತಟ್ಟೆಪಳ್ಳಿ, ನರಸಮ್ಮ ಶಿರೋಳ್ಳಿ, ಜಗನ್ನಾಥ ಸಜ್ಜನ್, ಹಣಮಂತರಾವ ಪಾಟೀಲ್, ಪಂಚಾಕ್ಷರಯ್ಯ ಸ್ವಾಮಿ, ನಾಗರೆಡ್ಡಿ ಕರ್ಚಖೇಡ ಕಣದಲ್ಲಿದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ ಶರಣಗೌಡ ಮುದ್ದಾ (ಚಿಂಚೋಳಿ ಸಾಲಗಾರರ ಕ್ಷೇತ್ರ), ಶ್ರೀಹರಿ ಕಾಟಾಪುರ (ಚಿಂಚೋಳಿ ಸಾಲಗಾರರಲ್ಲದ ಕ್ಷೇತ್ರ), ಚಂದ್ರಕಲಾ ತಟ್ಟೆಪಳ್ಳಿ (ನಿಡಗುಂದಾ ಮಹಿಳಾ ಮೀಸಲು ಕ್ಷೇತ್ರ), ಹಣಮಂತರಾವ ಪಾಟೀಲ್ (ಕೋಡ್ಲಿ ಸಾಮಾನ್ಯ ಕ್ಷೇತ್ರ), ನಾಗರೆಡ್ಡಿ ಕರ್ಚಖೇಡ (ಮಿರಿಯಾಣ) ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು: ಜಗದೀಶಸಿಂಗ್ ಠಾಕೂರ್(ಪೋಲಕಪಳ್ಳಿ), ಅಮರಜೀವನ ಯಾಕಾಪುರ (ಗರಗಪಳ್ಳಿ), ಕಾಶೀನಾಥ ಪೂಜಾರಿ (ಸುಲೇಪೇಟ), ಸುಜಾತಾ (ಚಿಮ್ಮನಚೋಡ), ಸುಭಾಷ ಮಂತ್ರಿ (ಚಂದನಕೇರಾ), ಗೋಪಾಲರೆಡ್ಡಿ (ಐನಾಪುರ), ದಶರಥ ಭೀಮರಾವ (ಕುಂಚಾವರA), ಮಹಾದೇವಪ್ಪ ಭೀಮಳ್ಳಿ (ರಟಕಲ್), ಮಲ್ಲಿಕಾರ್ಜುನ ಬೇಳಕೇರಿ (ಚಿಮ್ಮಇದಲಾಯಿ).
ಪ್ರಮುಖರಾದ ಗೌತಮ ಪಾಟೀಲ್, ಸಂತೋಷ ಗಡಂತಿ, ಶ್ರೀಮಂತ ಕಟ್ಟಿಮನಿ, ಅಬ್ದುಲ್ ಬಾಸೀದ್, ಬಸವರಾಜ ಸುಲೇಪೇಟ, ಆನಂದ ರೆಡ್ಡಿ, ಸಂಗಾರೆಡ್ಡಿ, ಗುಂಡಪ್ಪ, ಅಮೃತಯ್ಯ, ವಿಶ್ವನಾಥರೆಡ್ಡಿ, ಸುಬಾನರೆಡ್ಡಿ, ಮಹೇಶ ಪಾಟೀಲ್, ಬಿಚ್ಚಾರೆಡ್ಡಿ ಪಾಟೀಲ್, ಅಶೋಕರೆಡ್ಡಿ, ವಿಶ್ವನಾಥ ಚಿಂತಪಳ್ಳಿ, ನರಸರೆಡ್ಡಿ ಚಿಂತಪಳ್ಳಿ, ಪಾಶಮಿಯ್ಯ ಕರ್ಚಖೇಡ ಇತರರಿದ್ದರು.