ಜಿಲ್ಲೆ

ಚಿಂಚೋಳಿ; ಪಟಪಳ್ಳಿ- ಯಂಪಳ್ಳಿ ಸಂಪರ್ಕ ಕಡಿತ

ಚಿಂಚೋಳಿ: ಗಡಿ ತಾಲೂಕು ಚಿಂಚೋಳಿಯಲ್ಲಿ ಶನಿವಾರದಿಂದ ಮಳೆ ಸುರಿಯುತ್ತಿದ್ದು, ಬಹುತೇಕ ಹಳ್ಳ-ಕೊಳ್ಳ ಮೈದುಂಬಿ ಹರಿಯುತ್ತಿವೆ. ಕೆಲವೆಡೆ ರಸ್ತೆ ಸಂಪರ್ಕಗಳು ಕಡಿತಗೊಂಡು ಜನರು ಸಮಸ್ಯೆ ಅನುಭವಿಸುವಂತಾಯಿತು.

ಪಟಪಳ್ಳಿ - ಯಂಪಳ್ಳಿ ರಸ್ತೆ ಮಧ್ಯೆದ ಹಳ್ಳ ಮೈದುಂಬಿ ಹರಿಯುತ್ತಿದ್ದು, ಸಂಪರ್ಕ ಕಡಿತಗೊಳಿಸಲಾಯಿತು. ಇದಿರಿಂದ ಗ್ರಾಮದ ಜನತೆ ಸಂಚಾರಕ್ಕಾಗಿ ಪರದಾಡುವಂತಾಯಿತು.

ಹಳ್ಳ ತುಂಬಿದ್ದರಿಂದ ಪಟಪಳ್ಳಿ ಗ್ರಾಮದ ಹೊಸ ಊರಿಗೆ ಹಾಗೂ ಯಂಪಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸುತ್ತಮುತ್ತಲಿನ ಜಮೀನುಗಳಿಗೂ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದೆ. ನೀರಿನ ಮಟ್ಟ ಇಳಿಯುವವರೆಗೆ ಪಟಪಳ್ಳಿ ಹೊಸ ಊರಿನ ಜನತೆಗೆ ಸಂಪರ್ಕವೇ ಇಲ್ಲದಂತಾಗಿದೆ.