ಜಿಲ್ಲೆ

ಚಿಂಚೋಳಿ ತಾಲೂಕಿನ 24 ಗ್ರಾಮಗಳ ನೀರು ಕುಡಿಯಲು ಯೋಗ್ಯವಲ್ಲ: ತಜ್ಞರು ಆತಂಕ

ಚಿಂಚೋಳಿ: ತಾಲೂಕಿನಲ್ಲಿ ಸುಮಾರು 24 ಗ್ರಾಮಗಳಲ್ಲಿ ಫ್ಲೋರೈಡ್ ನೀರು ಹೊಂದಿವೆ ಎಂದು ಡಾ. ರೇಖಾ ಚೌದ್ರಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಅಧಿಕಾರಿ ಸಮದ ಪಟೇಲ್ ನೇತೃತ್ವದಲ್ಲಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಫ್ಲೋರೈಡ್ ಹೊಂದಿರುವ ಗ್ರಾಮಗಳ ಕುರಿತು ನೀರು ಸರಬರಾಜು ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಸಾಲೇಬೀರನಳ್ಳಿ ಗ್ರಾಮದಲ್ಲಿ ಫ್ಲೋರೈಡ್ ನೀರಿನ ಮಟ್ಟ ಹೆಚ್ಚಾಗಿದೆ. ಜನರಿಗೆ ನೀರು ಯೋಗ್ಯವಾಗಿಲ್ಲ. ಜಾಗೃತಿ ಅವಶ್ಯವಾಗಿದೆ ಎಂದರು.

ತಾ.ಪಂ ಇಓ ಶಂಕರ್ ರಾಠೋಡ ಮಾತನಾಡಿ, ಸ್ವಯಂ ಭೇಟಿ ನೀಡುತ್ತೇನೆ. ಜನರಲ್ಲಿ ಜಾಗೃತಿ ಮೂಡಿಸೋಣ. ನೀರು ಬಳಕೆಯ ಕುರಿತು ಮಾಹಿತಿ ನೀಡಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಹ್ಮದ ಗಫಾರ್, ಬಿಸಿ ಊಟ ಯೋಜನಾಧಿಕಾರಿ ಜಯಪ್ಪ ಚಾಪಲ್, ಸಿಡಿಪಿಒ ಗುರುಪ್ರಸಾದ್ ಕವಿತಾಳ, ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.