ಚಿಂಚೋಳಿ: ರಾಜ್ಯ ಸರಕಾರದ ಗೃಹ ಲಕ್ಷ್ಮಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಪ್ರತಿಯೊಬ್ಬ ಮನೆಯ ಯಜಮಾನನಿಗೆ 2 ಸಾವಿರ ನೇರ ಖಾತೆಗೆ ತಲುಪಲು ಸರ್ಕಾರಿ ನೌಕರರು ಶ್ರಮಿಸಬೇಕು ಎಂದು ಚಿಮ್ಮನಚೋಡ ಗ್ರಾ.ಪಂ ಕಾರ್ಯದರ್ಶಿ ಜಗನ್ನಾಥ ರೆಡ್ಡಿ ತಿಳಿಸಿದರು.
ಚಿಮ್ಮನಚೋಡ ಗ್ರಾಮದ ಕರ್ನಾಟಕ ಕಲ್ಯಾಣ ಮಂಟಪದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಗ್ರಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಚಾಲನೆ ನೀಡಿದರು. ಇದಕ್ಕೂ ಮುಂಚೆ ಗೃಹ ಲಕ್ಷ್ಮಿ ಯೋಜನೆಯ ಕುರಿತು ಮಾಹಿತಿ ಕರಾಪತ್ರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೋವಿಂದರೆಡ್ಡಿ ಮುದನಾಳ, ಉಪಾಧ್ಯಕ್ಷ ರೇಷ್ಮಾ ರಾಜೇಂದ್ರ, ಮಲ್ಲಿಕಾರ್ಜುನ ಕಟ್ಟಿ, ವಿಶ್ವನಾಥ ರೆಡ್ಡಿ, ಸಂತೋಷ ಗೌನಳ್ಳಿ, ಪ್ರಕಾಶ್, ಬಾಬುಮಿಯ್ಯ, ಜಗನ್ನಾಥ ಹೊಸಮನಿ, ಹನೀಫಸಾಬ, ಮಹ್ಮದ ಖುರೇಷಿ, ಪಂಡರೀನಾಥ, ವಿಜಯಕುಮಾರ ನರನಾಳ, ಶೃತಿ, ಫುರಖಾನಬೇಗಂ,ರುಕ್ಮಾಬಾಯಿ, ನಸ್ರೀನ್ ಬೇಗಂ, ಅನೀತಾ ರಾಜು, ಲಕ್ಷ್ಮಿಬಾಯಿ ನರನಾಳ, ಸೇರಿದಂತೆ ಅನೇಕ ಮಹಿಳೆಯರು ಇದ್ದರು.