ಜಿಲ್ಲೆ

ಚಿಂಚೋಳಿ; ಕೋಡ್ಲಿ ಕ್ರಾಸ್​ನಲ್ಲಿ ಮಳೆ ಮಧ್ಯೆಯೇ ಅನ್ನದಾಸೋಹ

ಚಿಂಚೋಳಿ: ಶ್ರಾವಣ ನಡುವಿನ ಸೋಮವಾರದ ನಿಮಿತ್ತ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಅನ್ನದಾಸೋಹ ನಡೆಯಿತು.

ಶ್ರೀ ರೇವಣಸಿದ್ಧೇಶ್ವರ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಕೋಡ್ಲಿ ಕ್ರಾಸ್ ಬಳಿ ಯುವಕರಿಂದ ಭಕ್ತಾದಿಗಳಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಳೆಯ ಮಧ್ಯೆಯೂ ಅನ್ನ ದಾಸೋಹ ಮುಂದುವರಿಸಲಾಯಿತು. ಸುಮಾರು 300ಕ್ಕೂ ಅಧಿಕ ಜನರು ಪ್ರಸಾದ ಸೇವಿಸಿದರು.

ಪ್ರಮುಖರಾದ ಸಂತೋಷ ಜಾಧವ್, ಯುವರಾಜ್ ಚೌವ್ಹಾಣ್, ಸಂಗಮೇಶ ತಾಂಡೂರ, ಶಂಕರ ಪಾಟೀಲ, ಮಲ್ಲು ಭಜಂತ್ರಿ, ಸೇರಿದಂತೆ ಅನೇಕರು ಇದ್ದರು.