ಜಿಲ್ಲೆ

ಚಿಂಚೋಳಿ; 8ನೇ ವರ್ಷದ ಛತ್ರಪತಿ ಶಿವಾಜಿ ಗಣೇಶ ಉತ್ಸವ, ಯುವ ಶಕ್ತಿ ಕಾರ್ಯಕ್ರಮ ಆಯೋಜನೆ

ಚಿಂಚೋಳಿ: ಪಟ್ಟಣದಲ್ಲಿ ಕಳೆದ 8 ವರ್ಷಗಳಿಂದ ಛತ್ರಪತಿ ಶಿವಾಜಿ ಯುವಕ ಸಂಘವು ಗಣೇಶ ಉತ್ಸವ ಆಚರಿಸುತ್ತಿದ್ದು, ಈ ಬಾರಿ ಉತ್ಸವ ನಿಮಿತ್ತ ಯುವ ಶಕ್ತಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಕಿರಣ್ ಪಂಚಾಳ ತಿಳಿಸಿದರು.

ಶ್ಲೋಕ ಪಠಣ, ಭಾವಾರ್ಥ ಸ್ಪರ್ಧೆ ನಡೆಯಲಿದೆ. ಶಾಸ್ತ್ರ, ಪುರಾಣ, ಉಪನಿಷತ್​, ಭಗವದ್ಗಿತೆ, ಶರಣರ ವಚನಗಳು, ದಾಸಸಾಹಿತ್ಯ, ಭಕ್ತಿಗೀತೆಗಳು, ಭಾವಗೀತೆಗಳು, ಸನಾತನ ಧರ್ಮದ ಕುರಿತು 12 ವರ್ಷದ ಒಳಗಿನ ಮಕ್ಕಳು 1 ನಿಮಿಷದ ವಿಡಿಯೋ ಮಾಡಿ, ಸೆ.16 ರೊಳಗೆ ಮೊ. 8880888665 ಗೆ ಕಳುಹಿಸಬೇಕು. ಅತ್ಯುತ್ತಮ ಶ್ಲೋಕ ಪಠಣೆ ಮಾಡಿದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.