ಬಾಗಲಕೋಟೆ ನಗರದ ದಡ್ಡೇನವರ ಕ್ರಾಸ್‌ನಲ್ಲಿ ಚಾಲಕರ ಹೊಡೆದಾಟ ದೃಶ್ಯ 
ಜಿಲ್ಲೆ

ಚಾಲಕರಿಬ್ವರ ಡಿಶುಂ ಡಿಶುಂ…!!

ಬಾಗಲಕೋಟೆ: ನಡು ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ಟಂಟಂ ವಾಹನ ಚಾಲಕರು ಹೊಡೆದಾಡಿಕೊಂಡ ಘಟನೆ ನಗರದ ದಡ್ಡೇನವನರ ಕ್ರಾಸ್‌ನಲ್ಲಿ ಗುರುವಾರ ನಡೆದಿದೆ.
ಓವರ್ ಟೇಜ್ ಮಾಡುವ ವಿಚಾರದಲ್ಲಿ ಆರೋಪಿಸಿ ಇಬ್ಬರು ಚಾಲಕರು ಹೊಡೆದಾಡಿಕೊಂಡಿದ್ದಾರೆ. ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡಿದ್ದಾರೆ. ಪರಸ್ಪರ ಬಟ್ಟೆ ಎಳೆದಾಡಿಕೊಂಡಿದ್ದರು. ಸ್ಥಳೀಯರ ಮಧ್ಯಸ್ಥಿಕೆಯಿಂದ ಜಗಳ ತಣ್ಣಗಾಯಿತು. ಘಟನೆ ಹಿನ್ನಲೆಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಮ ಆಗಿತ್ತು.