ಜಿಲ್ಲೆ

ಚಾಲಕರ ಕೊಡುಗೆ ಅಪಾರ

ತೆಲಸಂಗ: ಇದು ಕೇವಲ ಒಂದು ಸಂಘದ ಉದ್ಘಾಟನೆಯಲ್ಲ, ಬದಲಿಗೆ ನಿಮ್ಮೆಲ್ಲರ ಒಗ್ಗಟ್ಟು, ಸಹಕಾರ ಮತ್ತು ಭವಿಷ್ಯದ ಆಶಯ ಸಾಕಾರವಾಗಿದೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.

ಗ್ರಾಮದಲ್ಲಿ ಕರ್ನಾಟಕ ಚಾಲಕರ ಒಕ್ಕೂಟದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸ್ಥಳೀಯ ಚಾಲಕರ ಸಂಘದ ನೂತನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದ ಆರ್ಥಿಕತೆಗೆ ಚಾಲಕರ ಕೊಡುಗೆ ಅಪಾರ ಎಂದರು.

ವಕೀಲ ಅಮೋಘ ಖೊಬ್ರಿ ಮಾತನಾಡಿ, ಜೀವ ಮತ್ತು ವಾಹನಗಳ ವಿಮೆ, ಚಾಲನಾ ಲೈಸೆನ್ಸ್ ಹೀಗೆ ಕಾನೂನು ಪಾಲಿಸಿ ನಿಮ್ಮ ಕುಟುಂಬಕ್ಕೆ ಆಸರೆಯಾಗಬೇಕು ಎಂದರು.

ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ನಾರಾಯಣ ಸ್ವಾಮಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅರುಣ ಪಾಟೀಲ, ಆನಂದ ಯರಡ, ಎಂ.ಡಿ.ಯಾಸೀನ್ ಇನಾಮದಾರ, ಅರವಿಂದ ಉಂಡೋಡಿ, ಡಾ.ಬಿ.ಎಸ್.ಕಾಮನ, ಸುಭಾಸ ಮೋರೆ, ಶಿವಪ್ಪ ಹತ್ತಿ, ಶ್ರೀಶೈಲ ಶೆಲ್ಲೆಪ್ಪಗೋಳ, ಸುಭಾಸ ಖೊಬ್ರಿ, ಧರೆಪ್ಪ ಮಾಳಿ, ಶ್ರೀಶೈಲ ಇಂಚಗೇರಿ, ಪಿಂಟು ಬೆಟಗೇರ, ಬಂಡು ಬಂಡಾರಿ, ವೀರೇಶ ಗಣಾಚಾರಿ, ಪ್ರಕಾಶ ಜಾಲಿಗಾರ ಇತರರಿದ್ದರು. ಸ್ಥಳೀಯ ಘಟಕದ ಅಧ್ಯಕ್ಷ ಮಲ್ಲು ಜಾಲಿಗಾರ ನಿರೂಪಿಸಿದರು.