This is masked man robber with stolen gold. 
ಜಿಲ್ಲೆ

ಚಾಮುಂಡಿದೇವಿಗೆ ಹಾಕಿದ್ದ ಚಿನ್ನದ ತಾಳಿ ಕಳವು

ಮೈಸೂರು: ಗಾಯತ್ರಿಪುರಂನ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸೋಗಿನಲ್ಲಿ ಬಂದ ಕಳ್ಳನೊಬ್ಬ ದೇವಿಗೆ ಹಾಕಿದ್ದ ಚಿನ್ನದ ತಾಳಿಯನ್ನೇ ಎಗರಿಸಿ ಪರಾರಿಯಾಗಿದ್ದಾನೆ.

ದೇವಸ್ಥಾನದ ಬಾಗಿಲು ತೆರೆದ ಅರ್ಚಕರು, ಪೂಜೆಗಾಗಿ ಸಿದ್ಧತೆ ನಡೆಸಲು ತೆರಳಿದ್ದ ವೇಳೆ ದೇವಸ್ಥಾನದ ಆವರಣದಲ್ಲೇ ಕಳ್ಳ ಇದ್ದ. ಬಳಿಕ ಗರ್ಭ ಗುಡಿಗೆ ತೆರಳಿ ದೇವಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಳಚಿಕೊಂಡು ಹೋಗಿದ್ದಾನೆ.

ಪುರೋಹಿತರು ವಾಪಸ್ ಬಂದಾಗ ದೇವಿಯ ಕತ್ತಿನಲ್ಲಿ ಮಾಂಗಲ್ಯ ಸರ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಅರ್ಚಕರು ನೀಡಿದ ದೂರಿನ ಮೇರೆಗೆ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಕ್ತರ ಸೋಗಿನಲ್ಲಿ ದೇವಿಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕದಿಯುತ್ತಿರುವ ದೃಶ್ಯ ದೇವಸ್ಥಾನದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ ಪಡಿತರ ಅಕ್ಕಿ ಅಕ್ರಮ ಸಾಗಣೆ

ಮೈಸೂರು: ಆಲನಹಳ್ಳಿಯಲ್ಲಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಗೌಸಿಯಾ ನಗರದ ನಿವಾಸಿಗಳಾದ ಮುಬಾರಕ್, ಅಸ್ಲಂ ಬಂಧಿತರು.

ಬಂಧಿತರಿಂದ 5.5 ಕ್ವಿಂಟಾಲ್ ಪಡಿತರ ಅಕ್ಕಿ, 2 ಆಟೋ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ಆಲನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.