ಜಿಲ್ಲೆ

ಚಾಮರಾಜನಗರದಲ್ಲಿ ಟ್ರಕ್ ಪಲ್ಟಿ


ಚಾಮರಾಜನಗರ: ನಗರದಲ್ಲಿ ಅಪಘಾತ ವಲಯವೆಂದೆ ಕರೆಯಲ್ಪಡುವ ಎಂ.ಡಿ. ಲಾಡ್ಜ್ ತಿರುವಿನಲ್ಲಿ ಶುಕ್ರವಾರ ಟ್ರಕ್ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಸಂತೇಮರಹಳ್ಳಿ ವೃತ್ತ-ಶ್ರೀಭುವನೇಶ್ವರಿ ವೃತ್ತ ಮಾರ್ಗ ಮಧ್ಯದ ತಿರುವಿನಲ್ಲಿ ಟ್ರಕ್ ಪಲ್ಟಿ ಹೊಡೆದಿದೆ. ಮೈಸೂರಿನಿಂದ ತಮಿಳುನಾಡಿಗೆ ಸೋಲಾರ್ ಪ್ಲೇಟ್‌ಗಳನ್ನು ತುಂಬಿಕೊಂಡು ಹೋಗುವಾಗ ಅವಘಡ ಸಂಭವಿಸಿದೆ. ಚಾಲಕ ಮತ್ತು ಕ್ಲೀನರ್ ಲಾರಿಯಿಂದ ಹೊರಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅಪಘಾತದಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ವಾಹನವನ್ನು ತೆರವುಗೊಳಿಸಿದರು.