ಜಿಲ್ಲೆ

ಚಾಮರಾಜನಗರ ದಸರಾದಲ್ಲಿ‌ ಮಹಿಳೆಯರ ಕಲರವ..

ಚಾಮರಾಜನಗರ: ಜಿಲ್ಲಾ ದಸರಾ ಅಂಗವಾಗಿ ನಗರದ ರಥದ ಬೀದಿಯಲ್ಲಿ ಬುಧವಾರ ಆಯೋಜಿಸಿರುವ ವಿವಿಧ ಸ್ಪರ್ಧೆಗಳಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ.

ವಸತಿ, ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಸ್ಪರ್ಧೆಗೆ ಬೆಳಗ್ಗೆ ಚಾಲನೆ ನೀಡಿದರು. ಪ್ರಸ್ತುತ ರಂಗೋಲಿ ಸ್ಪರ್ಧೆ ಮುಗಿದಿದ್ದು, ಮಡಿಕೆ ಹೊಡೆಯುವುದು,  ಒಲೆ‌ ರಹಿತ ಅಡುಗೆ, ಲೆಮೆನ್ ರೇಸ್, ಮ್ಯೂಸಿಕಲ್ ಚೇರ್, ಬಕೆಟ್ ಗೆ ಬಾಲ್ ಹಾಕ ಸ್ಪರ್ಧೆಗಳು ನಡೆಯುತ್ತಿವೆ. ಮಹಿಳೆಯರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದಾರೆ‌. ವಿಜೇತರಿಗೆ ವೇದಿಕೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ.