ಜಿಲ್ಲೆ

ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ

ಚಾಮರಾಜನಗರ: ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಈಶ್ವರಿ ಸೋಷಿಯಲ್ ಟ್ರಸ್ಟ್ ವತಿಯಿಂದ ನಡೆದ ಸಂಕ್ರಾಂತಿ ಸಂಭ್ರಮ, ವಿಜೇತ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ, ಶ್ಲೋಕ ಪಠಿಸಿ ವಿಶ್ವದಾಖಲೆ ಮಾಡಿರುವ ಚಿರಂಜೀವಿ ಡಾ.ಪೃಥುಪಿ. ಅದ್ವೈತ್ ಗೆ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ, ಭಕ್ತಿಗೀತೆಗಳ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಾಮರಾಜನಗರ ಬ್ಯಾಡ್ಮಿಂಟನ್ ತುಂಬಾ ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ವಜ್ರಮುಷಿ ಕಾಳಗದಲ್ಲಿ ಚಾಮರಾಜನಗರ ಜೆಟೈ ಜನಾಂಗದವರು ಭಾಗವಹಿಸಿ ಪ್ರಶಸ್ತಿ ತಂದಿದ್ದಾರೆ. ಇಂದು ಈಶ್ವರಿ ಸೋಷಿಯಲ್ ಟ್ರಸ್ಟ್ ಅನೇಕ ಕ್ರೀಡಾ ಸಾಧಕರಗಳನ್ನು ಗುರುತಿಸಿ ಸನ್ಮಾನಿಸಿರುವುದು, ಹಾಗೂ ಶ್ಲೋಕ ಪಠಿಸಿ ವಿಶ್ವದಾಖಲೆ ಮಾಡಿರುವ ಚಿರಂಜೀವಿ ಡಾ.ಪೃಥು ಅದ್ವೈತ್ ಗೆ ಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಿರುವುದು ಬಹಳ ಅರ್ಥಪೂರ್ಣವಾಗಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ಚಾಮರಾಜ ಒಡೆಯರ್ ಪ್ರಶಸ್ತಿ ಸ್ವೀಕರಿಸಿರುವ ಡಾ.ಪ್ರಥುಪಿ.ಅದೈತ್ ಹಾಗೂ ಕ್ರೀಡಾ ಸಾಧಕರುಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿದ್ಯಾಲಯ ಸಂಚಾಲಕರಾದ ಜಿ.ದಾನೇಶ್ವರಿ, ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಬಸಬವರಾಜೇಂದ್ರ, ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಹೆಚ್.ಜಿ.ಕುಮಾರಸ್ವಾಮಿ ಮಾತನಾಡಿದರು. ಈಶ್ವರಿ ಸೋಷಿಯಲ್ ಟ್ರಸ್ಟ್‌ ಸಂಸ್ಥಾಪಕ ಸಿ.ಎಂ.ವೆಂಕಟೇಶ್ ಪ್ರಾಸಾವಿಕ ‌ ಭಾಷಣ ಮಾಡಿದರು.  ಜಯಲಕ್ಷ್ಮೀ ವೆಂಕಟೇಶ್, ಮೂರ್ತಿ ನಿರೂಪಿಸಿದರು. ಕಾರ್ಯಕ್ರಮ ನಂತರ ಭಕ್ತಿಗೀತೆಗಳ ಗೀತಗಾಯನ ನಡೆಯಿತು.