ಜಿಲ್ಲೆ

ಚಾಕುವಿನಿಂದ ಪರಸ್ಪರ ಇರಿತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಬರೀ 21,60 ರೂಪಾಯಿ ಸಲುವಾಗಿ ಹಾಡಹಗಲೇ ಇಬ್ಬರು ಪರಸ್ಪರ ಚಾಕುವಿನಿಂದ ಹೊಡೆದಾಡಿಕೊಂಡ ಘಟನೆ ನಗರದ ಕರ್ಜಗಿ ಓಣಿಯಲ್ಲಿ ಬುಧವಾರ ನಡೆದಿದೆ.

ಹಣದ ವಿಚಾರವಾಗಿ ಇರ್ಫಾನ್ ಬೇಪಾರಿ ಹಾಗೂ ಮೊಹಮ್ಮದ್ ಶಫಿ ನಡುವೆ ಜಗಳ ನಡೆದಿದೆ. ತರಕಾರಿ ಮಾರುತ್ತಿದ್ದ ಮೊಹಮ್ಮದ್ ಶಫಿಗೆ ಇರ್ಫಾನ್ ಬೇಪಾರಿ 2160 ರೂ. ಕೊಡುವಂತೆ ಕೇಳಿದ್ದಾನೆ. ಸಿಟ್ಟಿಗೆದ್ದ ಶಫಿ, ಇರ್ಫಾನ್ ಕಣ್ಣಿಗೆ ಕಾರದ ಪುಡಿ ಎರಚಿ, ಚಾಕುವಿನಿಂದ ಎದೆ ಮತ್ತು ಬೆನ್ನಿಗೆ ಇರಿದಿದ್ದಾನೆ. ಆಮೇಲೆ ಇರ್ಫಾನ್ ಕೂಡ ಶಫಿಯ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದು, ಇಬ್ಬರಿಗೂ ಗಾಯಗಳಾಗಿದ್ದು, ಕಿಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.