filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.38055557, 0.34945834);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 34; 
ಜಿಲ್ಲೆ

ಚಾ.ನಗರ-ಹೆಜ್ಜಾಲ ರೈಲ್ವೆಗೆ ಬೇಕಿದೆ ಮರುಜೀವ

ಎ.ಎಸ್.ಮಣಿಕಂಠ

*2 ದಶಗಳ ಹಿಂದೆ ದೊರೆತಿದ್ದ ರೈಲುಮಾರ್ಗ ಅನುಮತಿ

*ನೂತನ ಸಂಸದರ ಮುಂದಿದೆ ಬಹುದೊಡ್ಡ ಸವಾಲು

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹೆಜ್ಜಾಲ-ಚಾಮರಾಜನಗರ ರೈಲುಮಾರ್ಗಕ್ಕೆ ಮರುಜೀವ ಬೇಕಿದೆ.

ಬೇಂಗಳೂರು-ಕನಕಪುರ-ಚಾಮರಾಜನಗರ ಹಾಗೂ ತಮಿಳುನಾಡಿನ ಸತ್ಯಮಂಗಲ ಮಾರ್ಗವಾಗಿ ರೈಲುಮಾರ್ಗವನ್ನು ನಿರ್ಮಾಣ ಮಾಡಬೇಕು ಎಂದು 1997-98 ರಲ್ಲಿ ಅನುಮತಿ ದೊರೆತಿತ್ತು. ಆದರೆ ಚಾಮರಾಜನಗರದಿಂದ ಸತ್ಯಮಂಗಲದ ವರೆಗೆ ಮೀಸಲು ಅರಣ್ಯ ಪ್ರದೇಶ ಇರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ಅಡ್ಡಿಯಾಗಿ ಚಾಮರಾಜನಗರ-ಸತ್ಯಮಂಗಲ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿತ್ತು. ಬಳಿಕ ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ಮುನ್ನೆಲೆಗೆ ಬಂದಿತು. ಈ ರೈಲುಮಾರ್ಗ ನಿರ್ಮಾಣದ ಭೂಸ್ವಾಧೀನಕ್ಕೆ 2016 ರಲ್ಲಿ ರೈಲ್ವೆ ಇಲಾಖೆ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆದರೇ ಒಂದಿಲ್ಲೊಂದು ಕಾರಣಗಳಿಂದ ಉದ್ದೇಶಿತ ಈ ರೈಲುಮಾರ್ಗ ನಿರ್ಮಾಣ ನನೆಗುದಿಗೆ ಬೀಳುತ್ತಲೇ ಇರುವುದು ವಿಪರ್ಯಾಸವಾಗಿದೆ.

ಕಳೆದ ವರ್ಷ ಸಂಸದರಾಗಿದ್ದ ಡಿ.ಕೆ.ಸುರೇಶ್ ಅವರು ಈ ಯೋಜನೆಯ ಪ್ರಾರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಈ ಯೋಜನೆಯ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದರು. ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಒತ್ತಾಯಿಸಿದ್ದರು.

ಅದಾಗ್ಯೂ ಚಾಮರಾಜನಗರ-ಹೆಜ್ಜಾಲ ರೈಲು ಮಾರ್ಗ ನಿರ್ಮಾಣ ನನೆಗುದಿಗೆ ಬಿದ್ದಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಭೋಸ್‌ಅವರ ಮೇಲೆ ಅಪಾರವಾದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಈ ಉದ್ದೇಶಿತ ರೈಲುಮಾರ್ಗ ನಿರ್ಮಾಣಕ್ಕೆ ಹೆಚ್ಚಿನ ಗಮನಹರಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಯೋಜನೆಯ ವಿವರ:

ಚಾಮರಾಜನಗರ-ಸತ್ಯಮಂಗಲ ರೈಲುಮಾರ್ಗ ಈ ಮೊದಲು 260 ಕಿ.ಮೀ ಉದ್ದದ ಯೋಜನೆಯಾಗಿತ್ತು. 2016 ರಲ್ಲಿ ಹೆಜ್ಜಾಲ-ಚಾಮರಾಜನಗರಕ್ಕೆ ಇದನ್ನು ಸೀಮಿತಗೊಳಿಸಿರುವ ಕಾರಣದಿಂದ ಯೋಜನೆಯ ಉದ್ದ 142 ಕಿ.ಮೀ ಗೆ ಇಳಿದಿದೆ. ಈ ರೈಲು ಮಾರ್ಗಕ್ಕೆ ಸುಮಾರು 1700 ಎಕರೆಗಿಂತಲೂ ಅಧಿಕ ಖಾಸಗಿ ಭೂಮಿ ಅಗತ್ಯವಿದೆ. ಈಗಿನ ಅಂದಾಜು ಭೂಸ್ವಧೀನ ಮೊತ್ತವೇ 1500 ಕೋಟಿ ರೂ, ಗಳಿಗೂ ಹೆಚ್ಚಿದೆ. ಈ ಯೋಜನೆ ನಿರ್ಮಾಣದ ಜವಾಬ್ದಾರಿ ಹೆಚ್ಚಾಗಿ ಕೇಂದ್ರ ಸರ್ಕಾರದ ಮೇಲಿದ್ದರೂ, ಭೂಮಿ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ. ಜತೆಗೆ ರೈಲು ಮಾರ್ಗ ನಿರ್ಮಾಣ ವೆಚ್ಚದ ಶೇ.50 ರಷ್ಟನ್ನು ಭರಿಸಬೇಕಿರುತ್ತದೆ. ಈ ನಿಟ್ಟನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವೂ ಈ ಯೋಜನೆ ಕಾರ್ಯರೂಪಕ್ಕೆ ಮನಸ್ಸು ಮಾಡಬೇಕಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಜಿಲ್ಲೆಯ ಅಭಿವೃದ್ಧಿಗೆ ವರ:

ಚಾಮರಾಜನಗರ-ಹೆಜ್ಜಾಲ ರೈಲುಮಾರ್ಗ ಯೋಜನೆ ಜಾರಿಯಾದರೇ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಬಲ ದೊರೆಯಲಿದೆ. ಜಿಲ್ಲೆಯ ವ್ಯಾಪಾರ ಕೇಂದ್ರಿತ ಪಟ್ಟಣವಾಗಿರುವ ಕೊಳ್ಳೇಗಾಲ ಮಾರ್ಗದಲ್ಲಿ ರೈಲ್ವೆ ಹಾದುಹೋಗಿರುವುದರಿಂದ ಆರ್ಥಿಕ ಚಟುವಟಿಕೆ, ರೇಷ್ಮೆ ವ್ಯಾಪಾರ ಹಾಗೂ ಇನ್ನಿತರೆ ವಹಿವಾಟು ಮತ್ತಷ್ಟು ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಜಿಲ್ಲೆಯ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಕೈಗಾರಿಕೆಗಳು ಈಗಾಗಲೇ ಪ್ರಾರಂಭವಾಗಿದ್ದು, ಉತ್ಪಾದಿತ ವಸ್ತುಗಳು ಸಾಗಾಣಿಕೆ ಮತ್ತು ಕಚ್ಛಾವಸ್ತುಗಳ ತಯಾರಿಕೆಗೆ ಅವಕಾಶವಾಗಲಿದೆ. ಜಿಲ್ಲೆಯಿಂದ ಬೆಂಗಳೂರಿಗೆ ಹೋಗುವವರು ಈ ಮಾರ್ಗವನ್ನೇ ಅವಲಂಬಿಸುತ್ತಾರೆ. ಹನೂರು ಹಲವಾರು ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಒಟ್ಟಾರೆಯಾಗಿ ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ನಿರ್ಮಾಣವಾದರೇ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ:

ಚಾಮರಾಜನಗರ ರೈಲು ನಿಲ್ದಾಣಕ್ಕೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಅಂದಾಜು 2 ಕೋಟಿ ರೂ, ವೆಚ್ಚದಲ್ಲಿ ರೈಲು ನಿಲ್ದಾಣದ ಒಳ ಮತ್ತು ಹೊರ ಭಾಗದಲ್ಲಿ ನವೀಕರಣ ಕಾಮಗಾರಿ ಭರದಿಂದ ಸಾಗುತ್ತಿದೆ. ನಿಲ್ದಾಣದ ಮುಂಭಾಗ ಜೋಡಿರಸ್ತೆ ನಿರ್ಮಾಣ, ಪಾರ್ಕ್ ನಿರ್ಮಾಣ, ಪ್ಲಾಟ್ ಾರ್ಮ್ ಛಾವಣಿ ವಿಸ್ತರಣೆ, ವಾಹನಗಳ ನಿಲುಗಡೆಗೆ ಸೂಕ್ತ ಾರ್ಕಿಂಗ್ ವ್ಯವಸ್ಥೆ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಅತ್ಯಾಧುನಿಕ ಶೌಚಾಲಯ ನಿರ್ಮಾಣ, ಲ್‌ಟಿ ನಿರ್ಮಾಣ ಕಾಮಗಾರಿ ಹಾಗೂ ಇನ್ನಿತರೆ ಕೆಲಸಗಳು ಭರದಿಂದ ಸಾಗುತ್ತಿದೆ. ಹೆಜ್ಜಾಲ-ಚಾಮರಾಜನಗರ ರೈಲು ಮಾರ್ಗ ನಿರ್ಮಾಣವಾದರೇ ಜಿಲ್ಲಾ ಕೇಂದ್ರಕ್ಕೆ ಮತ್ತಷ್ಟು ವರದಾನವಾಗಲಿದೆ ಎಂಬುದು ಪ್ರಯಾಣಿಕರ ಆಶಯವಾಗಿದೆ.