ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯದ ಮುಖಂಡರಾದ ಆನಂದ ಈಳಗೇರ, ಮುತ್ತುರಾಜ ಕರಡಿ, ಚಂದ್ರಕಾಂತ ಈಳಗೇರ, ಶ್ರೀನಿವಾಸ ಈಳಗೇರ, ಅಶೋಕ ಕರಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 
ಜಿಲ್ಲೆ

ಚಳುವಳಿಯ ಹರಿಕಾರ ನಾರಾಯಣಗುರು

ಸಂತೋಷ ದೇಶಪಾಂಡೆ

ಬಾಗಲಕೋಟೆ: ೧೯ನೇ ಶತಮಾನದಲ್ಲಿ ಕೇರಳ ರಾಜ್ಯದಲ್ಲಿ ತಾಂಡವಾಡುತ್ತಿದ್ದ ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ವ್ಯವಸ್ಥೆಯಲ್ಲಿ ಮೈಲುಗಲ್ಲು ಸ್ಥಾಪಿಸಿದ ಚಳುವಳಿಗಳ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದ ಅವರು, ಭರತ ಭೂಮಿಯಲ್ಲಿ ಅನೇಕ ಸಂತ, ಮುನಿ ಮಾನವ ಉದ್ದಾರಕ್ಕಾಗಿ ಸತ್ಯ, ನ್ಯಾಯ ತತ್ವಾದರ್ಶನಗಳಿಂದ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು.

ಮಾನವರ ಉದ್ದಾರಕ್ಕಾಗಿ ಅನೇಕ ಗ್ರಂಥಗಳನ್ನು, ಟೀಕೆ, ಟಿಪ್ಪಣೆಗಳಿಗೆ ವ್ಯಾಖ್ಯಾನ ಬರೆದು ಸತ್ಯ ಸೋಧನೆಯ ಕಾರ್ಯ ಮಾಡಿದ್ದಾರೆ ಎಂದರು.
ಭಗವದ್ಗೀತೆಯೂ ಕೂಡಾ ಮಾನವಕುಲ ಒಂದೇ ಎಂದ ವ್ಯಾಖ್ಯಾನಿಸಿದೆ. ಈ ಎಲ್ಲ ವಿಚಾರಗಳಲ್ಲಿ ಕೊನೆಯದಾಗಿ ಕಂಡು ಬರುವುದು ಜಗತ್ ಕಲ್ಯಾಣ, ಮಾನವ ಕಲ್ಯಾಣದ ಗುರುಯಾಗಿತ್ತು. ಸಮಾಜದ ಅಡ್ಡದಾರಿ ಹಿಡಿಯುವ ಸಂದರ್ಭದಲ್ಲಿ ಶರಣ, ಸಂತ, ಋಷಿ ಮುನಿಗಳು ಅವರಿಸಿದ ಉದಾಹರಣೆಗಳು ಇವೆ. ವಿಶ್ವಗುರು ಬಸವಣ್ಣನವರ ಮಹಾ ಮಾನತಾವಾದ ಹಾಗೂ ವಚನಗಳಲ್ಲಿ ಕಂಡುಬರುತ್ತವೆ ಎಂದು ತಿಳಿಸಿದರು.

ಬಾದಾಮಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಮಹಾಂತೇಶ ಈಳಗೇರ ಮಾತನಾಡಿ, ಕೇರಳದ ತಿರವನಂತಪುರದಲ್ಲಿ ಜನ್ಮ ತಾಳಿದ ನಾರಾಯಣಗುರುಗಳು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸಿಸುವ ಸಲುವಾಗಿ ಕೇರಳದ ಜಾತಿ ಪೀಡಿತ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಸುಧಾರಣಾ ಚಳುವಳಿ ನಡೆಸಿದರು. ಇದರ ಪರಿಣಾಮವಾಗಿ ದೇವಾಲಯವನ್ನು ತೆರೆಯಲು ಮತ್ತು ಮೂರು ರಸ್ತೆಗಳನ್ನು ಜನರಿಗೆ ತಲುಪಿಸಲು ಕಾರಣವಾಯಿತು ಎಂದು ಹೇಳಿದರು.

ಗುರುಗಳ ದೃಷ್ಠಿಯಲ್ಲಿ ಬಡವರ, ದುರ್ಬಲರ ಸೇವೆಯೇ ದೇವರ ಸೇವೆಯಾಗಿತ್ತು. ಸಮಾನತೆಗಾಗಿ ಹಮ್ಮಿಕೊಂಡ ಶಿವಗಿರಿಯನ್ನು ಬಸವಣ್ಣನವರ ಅನುಭವ ಮಂಟಪಕ್ಕೆ ಹೋಲಿಸಲಾಗಿದೆ. ಶಿವಗಿರಿಯ ಮೂಲಕ ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವುದು ಹಾಗೂ ಮೂಲಭೂತ ಹಕ್ಕುಗಳ ಸಂರಕ್ಷಣೆಗಾಗಿ ಅಸ್ಪ್ರಶ್ಯತಾ ನಿರ್ಮೂಲನೆ ಮಾಡುವ ಗುರಿಗಳನ್ನು ಇಟ್ಟುಕೊಳ್ಳಲಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯದ ಮುಖಂಡರಾದ ಆನಂದ ಈಳಗೇರ, ಮುತ್ತುರಾಜ ಕರಡಿ, ಚಂದ್ರಕಾಂತ ಈಳಗೇರ, ಶ್ರೀನಿವಾಸ ಈಳಗೇರ, ಅಶೋಕ ಕರಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.