ಜಿಲ್ಲೆ

ಚಲನಶೀಲ ಸನಾತನ ಧರ್ಮ ವೀರಶೈವ

ಧಾರವಾಡ: ಇಷ್ಟಲಿಂಗ ಸಂಸ್ಕಾರ ಪ್ರಕ್ರಿಯೆಯಿಂದಾಗಿ ವರ್ಣ, ಆಶ್ರಮ, ದಾರ್ಶನಿಕ ಸಮಾನತೆಯ ವೈಶಿಷ್ಟ್ಯ ಇರುವ ವೀರಶೈವ ಧರ್ಮವು ಶಾಶ್ವತವಾದ ಚಲನಶೀಲತೆಯನ್ನು ಹೊಂದಿರುವುದರಿಂದ ಅದು ಸನಾತನ ಧರ್ಮ ಎಂಬ ಹಿರಿಮೆ ಗಳಿಸಿದೆ ಎಂದು ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ಜಂಗಮ ಯುವ ವೇದಿಕೆ ಗುರುವಾರ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಕುಲದ ಒಳಿತನ್ನೇ ಕೇಂದ್ರೀಕರಿಸಿ ಧರ್ಮದ ತತ್ವ ಚಿಂತನೆ ಪ್ರತಿಪಾದಿಸಿರುವ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವು ಸಮಸ್ತ ವೀರಶೈವರ ಪವಿತ್ರ ಹಬ್ಬವಾಗಿದೆ ಎಂದರು.

ಇನಾಂಹೊಂಗಲ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಸರ್ವ ಸಮಾಜಗಳ ಒಳಿತಿಗಾಗಿ ಮಾನವ ಧರ್ಮವನ್ನು ಕೇಂದ್ರೀಕರಿಸಿ ಸಮಗ್ರತೆಯ ತತ್ವ ಸಿದ್ಧಾಂತಗಳನ್ನು ಪ್ರತಿಪಾದಿಸಿರುವ ರೇಣುಕಾಚಾರ್ಯರ ಜಯಂತಿ ಎಲ್ಲರಿಗೂ ಅನ್ವಯವಾಗಿದೆ ಎಂದರು.

ಬ್ಯಾಹಟ್ಟಿ ಹಿರೇಮಠದ ಶ್ರೀ ಮರುಳಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಾನವನ ಬದುಕಿನ ಆದರ್ಶ ಮೌಲ್ಯಗಳನ್ನು ಹೊಂದಿರುವ ಸಿದ್ಧಾಂತ ಶಿಖಾಮಣಿಯ ಒಂದು ವಾರದ ಉಪನ್ಯಾಸ ಸರಣಿ ಹಮ್ಮಿಕೊಳ್ಳಬೇಕು ಎಂದರು.

ಹುಬ್ಬಳ್ಳಿ ನವನಗರದ ಕಾಶಿ ಶಾಖಾ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಹೊಸಯಲ್ಲಾಪುರ ಶ್ರೀ ಮಳೆಮಲ್ಲೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶಶಾಂಕ ದೇವರು ಉಪದೇಶ ನೀಡಿದರು. ಹೊಸಯಲ್ಲಾಪುರ ಹಿರೇಮಠದ ಶ್ರೀ ಗದಗಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಶಿವು ಹಿರೇಮಠ, ಸರೋಜಾ ಪಾಟೀಲ, ಮಹಾಂತೇಶ ಬೇತೂರಮಠ, ವಿಜಯಲಕ್ಷ್ಮೀ ಲೂತಿಮಠ, ಸುನಿತಾ ಹಿರೇಮಠ, ಗುರುಸ್ವಾಮಿ ಹಿರೇಮಠ, ವೀರೇಶ ಹಿರೇಮಠ, ಮೃತ್ಯುಂಜಯ ರೊಟ್ಟಿಮಠ, ಅನಸೂಯಾ ಹಿರೇಮಠ, ಮಹಾಂತೇಶ ಲಿಂಬಣ್ಣದೇವರಮಠ, ಹರಬಸಯ್ಯ ಹಿರೇಮಠ, ಶಕುಂತಲಾ ಕರಿಸಿದ್ಧನಮಠ, ಶ್ರೀಕಾಂತ ಹಳ್ಳಿಗೇರಿಮಠ, ಶಶಿಕಲಾ ಶಾಸ್ತ್ರಿಮಠ, ಶಿವಲಿಂಗಯ್ಯ ಹಿರೇಮಠ, ಜಯಲಕ್ಷ್ಮೀ ಚಿಕ್ಕಮಠ, ಮಹಾಂತೇಶ ಸೀಮಿಕೇರಿಮಠ, ಇತರರಿದ್ದರು.

ಅಮಿತ ಪಾಟೀಲ ಸ್ವಾಗತಿಸಿದರು. ಮೃತ್ಯುಂಜಯ ರೊಟ್ಟಿಮಠ ವಂದಿಸಿದರು.ಇದಕ್ಕೂ ಮೊದಲು ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ವಿವಿಧ ಜನಪದ ವಾದ್ಯಮೇಳದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು.

ಗಣ್ಯರಿಗೆ ಸನ್ಮಾನ: ವಿವಿಧ ಕ್ಷೇತ್ರಗಳ ಸಾಧನೆ ಪರಿಗಣಿಸಿ ಡಾ. ಉದಯಕುಮಾರ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಗುರುರಾಜ ಹುಣಸಿಮರದ, ಸುಮಂಗಲಾ ಕೊರವರ, ನಾಗನಗೌಡ ನೀರಲಗಿ, ಜೈಲಾನಿ ತಂಬೋಲಿ, ಮಂಜುನಾಥ ಹಿರೇಮಠ, ಸುಜಾತಾ ಆರಾಧ್ಯಮಠ, ಅನಿಲ ಮೈತ್ರಿ, ಪರಶುರಾಮ, ಬಸವರಾಜ ಸೂರಣಗಿಮಠ, ಲಕ್ಷ್ಮೀ ಹಿರೇಮಠ, ಆದಿತ್ಯ, ಅಕ್ಷಯ ಅವರನ್ನು ಸನ್ಮಾನಿಸಲಾಯಿತು.