ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ 
ಜಿಲ್ಲೆ

ಚರಂತಿಮಠಗೆ ನೇರ ಸವಾಲ್ ಹಾಕಿದ ಪೂಜಾರ

ಬಾಗಲಕೋಟೆ: ಬಿವಿವಿ ಸಂಘಕ್ಕೆ ಹಂಚಿಕೆ ಆಗಿದ್ದ ೨೦ ಎಕರೆ ವಿಸ್ತೀರ್ಣದ ಸೆಕ್ಟರ್ ೫೯ನ್ನು ಕಾನೂನುಬಾಹಿರ ಕೊಡಲಾಗಿದೆ. ಅದನ್ನು ರದ್ದು ಪಡಿಸಿ ಎಂದು ನಾನು ಓರ್ವ ಮಂತ್ರಿ ಬಳಿ ಹೇಳಿದ್ದೇನೆ ಎಂದು ಅನಗತ್ಯ ಸುಳ್ಳು ಹೇಳುತ್ತಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಧೈರ್ಯ ಇದ್ದರೆ ಆ ಮಂತ್ರಿ ಯಾರೆಂದು ಬಹಿರಂಗ ಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ನೇರವಾಗಿ ಸವಾಲ್ ಎಸೆದಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಮ್ಮ ಮೇಲೆ ತಮ್ಮದೇ ಪಕ್ಷದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾಡಿದ್ದ ಪ್ರತಿ ಆರೋಪಗಳಿಗೆ ಎಳೆಎಳೆಯಾಗಿ ತಿರುಗೇಟು ಕೊಟ್ಟ ಪೂಜಾರ, ಪ್ರತಿಯಾಗಿ ಚರಂತಿಮಠ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿವಿವಿ ಸಂಘವನ್ನು ಅನೇಕ ಮಹನೀಯರು ಕೂಡಿಕೊಂಡು ಕಟ್ಟಿ ಬೆಳೆಸಿದ್ದಾರೆ. ಪೂಜ್ಯ ಸ್ವಾಮೀಜಿಗಳು ಭಿಕ್ಷೆ ಬೇಡಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಅಂತ ಸಂಸ್ಥೆಗೆ ಚೇರಮನ್ ಆಗಿರುವ ಚರಂತಿಮಠ ಮೊದಲಿಗರೇನಲ್ಲ. ಆದರೆ, ಇವರು ಅಽಕಾರಕ್ಕೆ ಬಂದ ಬಳಿಕ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿದ್ದೆ ಹೆಚ್ಚು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಸಹ ಬಿವಿವಿ ಸಂಘದಲ್ಲಿ ಓದಿದ್ದೇನೆ. ಸಂಸ್ಥೆಯ ಬಗ್ಗೆ ನನಗೆ ಭಕ್ತಿ ಭಾವನೆ ಇವತ್ತಿಗೂ ಇದೆ. ತಾಯಿ ಹಾಗೂ ಕಲಿತ ಸಂಸ್ಥೆಗೆ ದ್ರೋಹ ಮಹಾ ಅಪರಾಧ ಎಂದು ನಂಬಿರುವವನು ನಾನು. ಆದರೆ, ರಾಜಕೀಯ ತೆವಲಿಗಾಗಿ ಅನ್ಯತಾ ನನ್ನ ಹೆಸರು ಎಳೆದು ತಂದು ಬಿವಿವಿ ಸಂಘದ ವಿರುದ್ಧ ಕೆಲಸ ಮಾಡುತ್ತಿದ್ದೇನೆ ಎಂದು ಸಾರ್ವಜನಿಕರಲ್ಲಿ ನನ್ನ ಬಗ್ಗೆ ತಪ್ಪು ಭಾವನೆ ಮೂಡಿಸುವ ಕೆಲಸವನ್ನು ಚರಂತಿಮಠ ಮಾಡುತ್ತಿದ್ದಾರೆ ಎಂದು ಕಿರಿಕಾರಿದರು.
ನಾನು ಮಂತ್ರಿ ಬಳಿ ಹೋಗಿ ತಪ್ಪು ಮಾಹಿತಿ ನೀಡಿದ್ದೇನೆ ಎನ್ನುವುದು ಚರಂತಿಮಠ ಅವರು ಗಾಳಿಯಲ್ಲಿ ಗುಂಡು ಹೊಡೆಯುವುದಾಗಿದೆ. ಅವರಷ್ಟು ಈ ಕೆಲಸ ಮಾಡಲು ಯಾರಿಗೂ ಬರಲ್ಲ. ನನ್ನ ವಿರುದ್ಧ ಸುಳ್ಳುಗಳ ಸರಮಾಲೆಯನ್ನು ಹೆಣೆದು ಮಾತನಾಡುತ್ತಿದ್ದೀರಿ. ಇದನ್ನು ಹೀಗೆಯೇ ಮುಂದುವರೆಸಿದರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದದರು.

ನನಗೆ ಬಿಟಿಡಿಎ ಸದಸ್ಯತ್ವ ಸಿಕ್ಕರೆ ನಿಮಗೇಕೆ ಹೊಟ್ಟೆ ಉರಿ? ಸರ್ಕಾರ ಇದನ್ನು ನನಗೆ ಭಿಕ್ಷೆ ಕೊಟ್ಟಿಲ್ಲ. ಪರಿಷತ್ ಸದಸ್ಯರಿಗೆ ಸಿಗಬೇಕಾದ ಸ್ಥಾನಮಾನ ಕೊಟ್ಟಿದೆ. ವಿರೋಧ ಪಕ್ಷದವರಿಗೆ ಅವಕಾಶ ಸಿಕ್ಕಿದ್ದಕ್ಕೆ ಆಡಳಿತ ಪಕ್ಷದವರು ಗಢಗಢ ಎನ್ನಬೇಕು. ಬದಲಾಗಿ ನೀವು ನಮ್ಮ ಪಕ್ಷದವರಾಗಿ ವಿರೋಧ ಮಾಡಲು ನಿಮಗೇನು ಬೇನೆ ಬಂದಿದೆ ಎಂದು ಚರಂತಿಮಠ ಅವರಿಗೆ ತಿವಿದರು.

ಪಕ್ಷದಲ್ಲಿ -Àಲಾನುಭವಿ ಅಂತ ಇದ್ದರೆ ಅದು ನೀವು ಮಾತ್ರ. ಪಕ್ಷದಲ್ಲಿ ಯಾವುದೇ ಶ್ರಮ ಇಲ್ಲದೇ ಬಂದು ಅಽಕಾರ ಪಡೆದಿದ್ದು ನೀವು. ಸ್ಥಳೀಯ ಸಂಸ್ಥೆಯಾಗಿದ್ದ ಬಿಟಿಡಿಎ ಅಧ್ಯಕ್ಷ ಸ್ಥಾನವನ್ನು ಕಾರ್ಯಕರ್ತರಿಗೆ ಕೊಡುವ ಬದಲಿಗೆ ಒಂದಲ್ಲ, ಎರಡು ಸಲ ಅದನ್ನು ನೀವೆ ಪಡೆದುಕೊಂಡಿದ್ದು, ನೀವೆ ಅಧ್ಯಕ್ಷರಾಗಬೇಕು ಎನ್ನುವ ಕಾರಣವೇನೋ? ಅಧ್ಯಕ್ಷಗಿರಿ ಹಾಗೂ ಚೇರಮನ್ ಗಿರಿಯಲ್ಲಿ ಕಾಲಕಳೆದಿರುವ ನಿಮಗೆ ಕಾರ್ಯಕರ್ತರ ಹಿತ ಕಾಯಲು ಆಗಲ್ಲ. ಇಷ್ಟು ದಿನ ಪಾರ್ಟಿಗೆ ಡ್ಯಾಮೇಜ್ ಆಗಬಾರದು ಎಂದು ನಾನು ಸುಮ್ಮನಿದ್ದೆ. ನೀವು ನನ್ನ ಬಗ್ಗೆ ವರಿಷ್ಠರಿಗೆ ಹೇಳುತ್ತೀರಾ? ನಿಮ್ಮ ವರ್ತನೆ ಅದೆಷ್ಟೋ ವರಿಷ್ಠರಿಗೆ ಬೇಸರ ತಂದಿದೆ. ನಿಮಗಿಂತ ನನಗೆ ಹೆಚ್ಚು ಜನ ವರಿಷ್ಠರು ಗೊತ್ತಿದ್ದಾರೆ. ನೀವು ರಾಜಕಾರಣ ಮಾಡಲು ಬಂದರೆ ನಾನು ತಯಾರು ಇದ್ದೇನೆ. ನೀವು ಬಿವಿವಿ ಸಂಘ ಬಿಟ್ಟು ಹೊರಗೆ ಬಂದು ರಾಜಕಾರಣ ಮಾಡಿ, ಅದಕ್ಕೆ ನಾನು ಸಿದ್ದನಿದ್ದೇನೆ ಎಂದು ಸವಾಲ್ ಹಾಕಿದರು.
ವಾಸ್ತವವಾಗಿ ನೀವು ಹಿಟ್ ಆ್ಯಂಡ್ ರನ್ ಗಿರಾಕಿ. ನಾನು ಹಾಗಲ್ಲ. ನನ್ನಿಂದ ಕಾರ್ಯಕರ್ತರಿಗೆ ನೋವಾದರೆ ಕ್ಷಮಿಸಿ ಎಂದು ಕೇಳುವ ಔದಾರ್ಯವನ್ನು ಬೆಳೆಸಿಕೊಂಡಿದ್ದೇನೆ. ನಿಮಗೆ ಅದೆಲ್ಲಿದೆ? ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಬಂದವರು ನೀವು. ಡಿಸಿಸಿ ಬ್ಯಾಂಕ್ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಿ.ಎಸ್.ನ್ಯಾಮಗೌಡ ಸೋಲಿಗೆ ಕಾರಣ ಯಾರು? ಅದನ್ನು ಜನರು ಇನ್ನೂ ಮರೆತಿಲ್ಲ. ನನ್ನ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆಂದು ಪಕ್ಷದ ಕಾರ್ಯಕರ್ತರನ್ನು ಹೊರಗೆ ಹಾಕಿದ್ದೀರಿ. ನಿಮ್ಮ ದಬ್ಬಾಳಿಕೆ ನಿಲ್ಲಿಸಿ, ಇನ್ನಾದರೂ ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡುತ್ತೇನೆ ಎಂದರು.