ಹನೂರು: ಪಟ್ಟಣದಿಂದ ಕೌದಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಲಾರಿ ಶುಕ್ರವಾರ ಮಹದೇಶ್ವರ ಬೆಟ್ಟದ ರಸ್ತೆ ಬದಿಯಲ್ಲಿನ ಚರಂಡಿಗೆ ಸಿಲುಕಿದ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು.
ಮಧ್ಯಾಹ್ನ 1.30ರ ವೇಳೆಗೆ ಹನೂರಿನಿಂದ ಕೌದಳ್ಳಿ ಗ್ರಾಮಕ್ಕೆ ಲಾರಿ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ಬರುವ ವಾಹನಗಳಿಗೆ ಸ್ಥಳ ನೀಡುವ ಸಲುವಾಗಿ ಚಾಲಕ ಲಾರಿಯನ್ನು ರಸ್ತೆ ಬದಿಗೆ ಸರಿಸಿದ್ದಾನೆ.
ಪರಿಣಾಮ ಚಕ್ರ ಚರಂಡಿಗೆ ಸಿಲುಕಿ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿತ್ತು. ಬಳಿಕ ಸ್ಥಳೀಯರ ನೆರವಿನೊಂದಿಗೆ ಲಾರಿ ಚಕ್ರವನ್ನು ಮೇಲೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.