ವೇಮಗಲ್ ಬಳಿಯ ಮೊರಾರ್ಜಿ ವಸತಿ ಶಾಲೆಗೆ ಬೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಅಕ್ರಂಪಾಷ, ತಹಸೀಲ್ದಾರ್ ಹರ್ಷವರ್ಧನ್ ಇದ್ದರು. 
ಜಿಲ್ಲೆ

ಚರಂಡಿ ಸ್ವಚ್ಛಳಿಸುವಂತೆ ನಗರಾಯುಕ್ತರಿಗೆ ಸೂಚನೆ

Webdesk - Narayanaswamy

ಕೋಲಾರ : ಜಿಲ್ಲಾಧಿಕಾರಿ ಅಕ್ರಂಪಾಷ ಭಾನುವಾರವೂ ಕೋಲಾರ ನಗರ ಸೇರಿದಂತೆ ವೇಮಗಲ್, ನರಸಾಪುರ ಮುಂತಾದ ಕಡೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ನಂತರ ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸ್ಥಳದಲ್ಲೆ ಸೂಚನೆ ನೀಡಿದ್ದಾರೆ.

ಭಾನುವಾರ ಬೆಳ್ಳಿಗ್ಗೆ ನಗರದ ರಹಮತ್ ನಗರ, ಮಿಲತ್ ನಗರ ಹಾಗು ಅಂತರಗಂಗೆ ರಸ್ತೆಗೆ ಬೇಟಿ ನೀಡಿ ಅಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ನಂತರ ಚರಂಡಿಗಳ ಸ್ವಚ್ಚತೆ ಮತ್ತು ಕಸ ವಿಲೆವಾರಿ ಮಾಡುವಂತೆ ನಗರಾಯುಕ್ತ ಶ್ರೀಕಾಂತ್‌ರವರಿಗೆ ಸೂಚಿಸಿದ್ದಾರೆ.

ರಹಮತ್ ನಗರ ಮತ್ತು ಮಿಲತ್ ನಗರ ಗಳಲ್ಲಿ ಚರಂಡಿಗಳು ಸ್ವಚ್ಚತೆಗೊಳ್ಳದೆ ಹಾಗು ರಸ್ತೆಗಳಲ್ಲಿ ಕಸದ ರಾಶಿಗಳು ಬಿದ್ದಿರುವುದನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು, ಹಾಗು ರಸ್ತೆಗಳಲ್ಲಿ ಬಿದ್ದಿರುವ ಹಳ್ಳ ಕೊಳ್ಳಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಸಾರ್ವಜನಿಕರು ತಂದು ಮಳೆಗಾಲ ಪ್ರಾರಂಭವಾಗಿದೆ, ಮಳೆ ಬಂದರೆ ಈ ರಸ್ತೆಗಳಲ್ಲಿ ನಾವು ಓಡಾಡುವುದು ಹೇಗೆ? ಹಳ್ಳ ಯಾವುದೆ ರಸ್ತೆ ಯಾವುದೆ ಎಂಬುದೆ ತಿಳಿಯುತ್ತಿಲ್ಲ, ಚರಂಡಿಗಳಲ್ಲಿ ಇರುವ ಕಸ ರಸ್ತೆಗಳ ಮೇಲೆ ಬರುತ್ತದೆ, ಮಳೆ ಹೆಚ್ಚಾಚದರೆ ಈ ಕಸ ಮನೆಗಳ ಒಳಕ್ಕೂ ನುಗ್ಗುತ್ತದೆ ಎಂದು ಜಿಲ್ಲಾಧಿಕಾರಿಗಳ ಬಳಿ ಸಮಸ್ಯೆಗಳನ್ನು ಸಾರ್ವಜನಿಕರು ತೋಡಿಕೊಂಡರು.

ಪ್ರತಿ ದಿನ ನಗರ ಪ್ರಧರ್ಶನ ಮಾಡುತ್ತಾ ಸಮಸ್ಯೆಗಳನ್ನು ಆಲಿಸಲಾಗುತ್ತಿದೆ, ನಗರ ಸಭೆಯಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಹೊಸ ಸಿಬ್ಬಂದು ನೇಮಕಾತಿ ಮತ್ತು ಹೊರ ಗುತ್ತಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರಕ್ಕೆ ಶಿಫರಸ್ಸು ಮಾಡಲಾಗಿದೆ, ಹಂತ ಹಂತ ವಾಗಿ ಮಳೆಗಾಲದೊಳಗಾಗಿ ಚರಂಡಿಗಳನ್ನು ಸ್ವಚ್ಚಗೊಳಿಸಲಾಗುವುದು, ನೀರು ನಿಲ್ಲದಂತೆ ಸರಾಗವಾಗಿ ಹೋಗಲು ವ್ಯವಸ್ಥೇ ಕಲ್ಪಿಸಿಕೊಡಲಾಗುವುದು ಎಂದು ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಭರವಸೆ ನೀಡಿದರು.

ಮದ್ಯಾಹ್ನದ ನಂತರ ವೇಮಗಲ್ ಬಳಿಯ ಮೊರಾರ್ಜಿ ವಸತಿ ಶಾಲೆಗೆ ಬೇಟಿ ನೀಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗು ತಹಸೀಲ್ದಾರ್ ಹರ್ಷವರ್ಧನ್ ಮಕ್ಕಳೊಂದಿಗೆ ಊಟ ಸವಿದು ವಸತಿ ನಿಲಯವನ್ನು ಪರಿಶೀಲಿಸಿದ ನಂತರ ಮಕ್ಕಳ ಯೋಗ ಕ್ಷೆಮವನ್ನು ವಿಚಾರಿಸಿ ಅವರೊಂದಿಗೆ ಸ್ವಲ್ಪ ಸಮಯ ಕಾಲ ಕಳೆದರು.

ವೇಮಗಲ್ ಬಳಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ನಂತರ ನರಸಾಪುರ ನಾಡಕಚೇರಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಜಾಗವನ್ನು ವೀಕ್ಷಣೆ ಮಾಡಿದರು.

ಉಪನೋಂದಣಾಧಿಕರಿಗಳ ಕಚೆರಿ ಸದ್ಯದಲ್ಲಿಯೆ ಸ್ಥಳಾಂತರ: ನಗರದ ಪ್ರಭಾತ್ ಚಿತ್ರ ಮಂದಿರ ಪಕ್ಕದಲ್ಲಿರುವ ಜಿಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯನ್ನು ತಾಲ್ಲೂಕು ಕಚೇರಿಯ ಒಂದನೆ ಮಹಡಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ತಹಸೀಲ್ದಾರ್ ಹರ್ಷವರ್ಧನ್ ತಿಳಿಸಿದ್ಧಾರೆ.

ಒಂದನೆ ಮಹಡಿಗೆ ಅಂಗವಿಕಲರು, ವಯೋವರದ್ದರು ಮೆಟ್ಟಿಲು ಹತ್ತಲು ಕಷ್ಠ ಸಾದ್ಯವಾಗಿದೆ ಎಂಬ ಸಾರ್ವಜನಿಕರ ಆರೋಪಗಳಿಗೆ ಉತ್ತರಿಸಿದ ತಹಸಿಲ್ದಾರ್ ರವರು ಈಗಾಗಲೆ ಲಿಫ್ಟ್ ಸೌಲಬ್ಯ ಕಲ್ಪಿಸಲು ಶಿಪಾರಸ್ಸು ಮಾಡಲಾಗಿದೆ, ಅಲ್ಲಿಯ ತನಕ ಕೆಳ ಅಂತಸ್ಥಿನಲ್ಲಿಯೆ ವ್ಯವಹರಿಸಲು ಅನುಕೂಲ ಕಲ್ಪಿಸಿಕೊಡಲಾಗುವುದು, ಲಿಫ್ಟ್ ಸೌಲಭ್ಯ ಕಲ್ಪಿಸಿದ ನಂತರ ಒಂದನೆ ಹಮಡಿಯಲ್ಲಿ ಉಪನೋಂದಣಿ ಕಚೇರಿ ಕಾರ್ಯನಿರ್ವಹಿಸಲಿದೆ ಎಂದರು.