ಕಲಬುರಗಿ: ಚಪಲಿ ಕೊಡಿಸಲು ನಿರಾಕರಿಸಿದ್ದಕ್ಕೆ ಯುವತಿ ಮನೆ ಬಿಟ್ಟು ಹೋದ ಟನೆ ನಗರದ ವಡ್ಡರಗಲ್ಲಿಯಲ್ಲಿ ನಡೆದಿದೆ. ಅಂಬಿಕಾ ಮನೆ ಬಿಟ್ಟು ಹೋದ ಯುವತಿ. ಮನೆಯಲ್ಲಿ ಚಪಲಿ ಕೊಡಿಸು ಎಂದು ತಾಯಿಯನ್ನು ಕೇಳಿದ್ದು, ಸದ್ಯ ದುಡ್ಡಿಲ್ಲ. ಪಿಂಚಣಿ ಹಣ ಬಂದ ನಂತರ ಕೊಡಿಸುತ್ತೇನೆ ಎಂದು ನಿರಾಕರಿಸಿದ್ದಾರೆ. ಅದೇ ಸಿಟ್ಟಿನಲ್ಲಿ ಒಂದು ದಿನ ಕಾಲೇಜಿಗೆ ರಜೆ ಹಾಕಿದ್ದಳು. ಮರುದಿನ ಕಾಲೇಜಿಗೆ ಹೋಗಿದ್ದು, ಸಂಜೆ ೪ಗಂಟೆ ಸುಮಾರಿಗೆ ದೊಡ್ಡಮ್ಮಗೆ ಕರೆ ಮಾಡಿ, ನಾನು ಎಲ್ಲಿಗಾದರೂ ಹೋಗುತ್ತೇನೆ, ಹುಡುಕಾಡಬೇಡಿ ಎಂದು ಹೇಳಿದ್ದಾಳೆ ಎಂದು ಯುವತಿ ತಾಯಿ ನೀಡಿದ ದೂರಿನಂತೆ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.