ಚನ್ನರಾಯಪಟ್ಟಣ: ಮನೆಯ ಹಿಂದಿನ ಬಾಗಿಲ ಲಾಕ್ ಮುರಿದು ಬೀರುವಿನಲ್ಲಿಟ್ಟಿದ್ದ 65 ಗ್ರಾಂ ತೂಕದ 2.90 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳವು ಮಾಡಿರುವ ಘಟನೆ ತಾಲೂಕಿನ ಅಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜು ಎಂಬುವರ ಪತ್ನಿ ರತ್ನಮ್ಮ, ಇಬ್ಬರು ಗಂಡು ಮಕ್ಕಳು, ಸೊಸೆ ಮೊಮ್ಮಕ್ಕಳು ಒಂದೇ ಮನೆಯಲ್ಲಿದ್ದರು.
ನಾಗರಾಜು ಅಪ್ಪೇನಹಳ್ಳಿ ಗೇಟ್‌ನಲ್ಲಿ ಹೊಸ ಮನೆ ಕಟ್ಟಿದ್ದು, ಅದೇ ಮನೆಯಲ್ಲಿ ಡಿ.15 ರಂದು ಸೊಸೆ ಪೂಜಾಳ ಸೀಮಂತ ಶಾಸ್ತ್ರ ಮಾಡಿದ್ದರು. ನಂತರ ಎಲ್ಲರೂ ಹೊಸ ಮನೆಯಲ್ಲೇ ಇದ್ದರು. ಡಿ.17
ರಂದು ಬೆಳಗ್ಗೆ ಪತ್ನಿ, ಮಗ-ಸೊಸೆ ಅಪ್ಪೇನಹಳ್ಳಿಯ ಹಳೇ ಮನೆಗೆ ಹೋಗಿದ್ದರು. ಟೀ ಮಾಡಲು ಸೊಸೆ ಅಡುಗೆ ಮನೆಗೆ ಹೋದಾಗ ಮಗುವಿನ ಚಿನ್ನದ ಓಲೆ ನೆಲೆದ ಮೇಲೆ ಬಿದ್ದಿತ್ತು. ಗಾಬರಿಯಿಂದ ಬಿರುವಿನ ಬಾಗಿಲು ತೆಗೆದು ನೋಡಿದಾಗ ಅದರಲ್ಲಿಟ್ಟಿದ್ದ 38 ಗ್ರಾಂ.ತೂಕದ ಚಿನ್ನದ ಮಾಂಗಲ್ಯ ಸರ, 15 ಗ್ರಾಂ.ತೂಕದ ಒಂದು ಜೊತೆ ಚಿನ್ನದ ಓಲೆ, 10 ಗ್ರಾಂ.ತೂಕದ ಒಂದು ಜೊತೆ ಚಿನ್ನದ ಓಲೆ,
2 ಗ್ರಾಂ.ನ ಒಂದು ಚಿನ್ನ ಉಂಗುರ ಕಳುವಾಗಿರುವುದು ಗೊತ್ತಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.