ಜಿಲ್ಲೆ

ಚನ್ನಮ್ಮ ವೃತ್ತದಲ್ಲಿ ಯದ್ವಾತದ್ವಾ ಬ್ಯಾರಿಕೇಡ್ ಅಳವಡಿಕೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸಂಚಾರ ಪೊಲೀಸರು ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಸೋಮವಾರ ಯದ್ವಾತದ್ವಾ ಬ್ಯಾರಿಕೇಡ್ ಅಳವಡಿಸಿದ್ದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಯಿತು.

ಬಸವ ವನ, ಅಯೋಧ್ಯಾ ಹೋಟೆಲ್ ಕಡೆಯಿಂದ ಚನ್ನಮ್ಮ ವೃತ್ತದಲ್ಲಿ ಯು ಟರ್ನ್ ತೆಗೆದುಕೊಳ್ಳಲು ಬಾರದಂತೆ ಬ್ಯಾರಿಕೇಡ್ ಅಳವಡಿಸಿದ್ದರಿಂದ ಕೋರ್ಟ್ ವೃತ್ತದವರೆಗೆ ತೆರಳಿ ರಾಯಣ್ಣ ವೃತ್ತದ ಕಡೆಯಿಂದ ಯೂ ಟರ್ನ್ ತೆಗೆದುಕೊಳ್ಳಬೇಕಾಗಿದೆ.

ಕಾರವಾರ ರಸ್ತೆ ಕಡೆಯಿಂದ ಚನ್ನಮ್ಮ ವೃತ್ತದ ಕಡೆಗೆ ಬರುವ ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದರು. ಇದರಿಂದ ಅಪಘಾತ ಸಂಭವಿಸುವ ಆತಂಕವಿತ್ತು. ಹಾಗಾಗಿ, ಸಂಚಾರ ಪೊಲೀಸರು ಮಿರ್ಜಾನಕರ ಪೆಟ್ರೋಲ್ ಬಂಕ್ ಬಳಿ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ತಡೆಯೊಡ್ಡಿದ್ದರು. ಆದರೂ ಸುಮ್ಮನಾಗದ ಸವಾರರು ಕಾರವಾರ ರಸ್ತೆಯಿಂದ ಬಂದು ಯು ಟರ್ನ್ ತೆಗೆದುಕೊಂಡು ಮತ್ತೆ ಚನ್ನಮ್ಮ ವೃತ್ತದ ಕಡೆಗೆ ಹೊರಟಿದ್ದರು. ಹಾಗಾಗಿ, ಚನ್ನಮ್ಮ ವೃತ್ತದ ಒಂದು ಭಾಗದಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಬಳಿಕ ವಾಹನ ಸಂಚಾರ ಹೆಚ್ಚಾಗಿದೆ. ಇಷ್ಟು ದಿನ ಸುಮ್ಮನಿದ್ದು ಇದೀಗ ಏಕಾಏಕಿ ಬ್ಯಾರಿಕೇಡ್ ಅಳವಡಿಸಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಬ್ಯಾರಿಕೇಡ್ ಬದಲು ಸಿಬ್ಬಂದಿ ನೇಮಿಸಿ, ರಸ್ತೆ ನಿಯಮ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದರು. ಅದರಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಹಾಗಾಗಿ, ಪ್ರಾಯೋಗಿಕವಾಗಿ ಚನ್ನಮ್ಮ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಸವಾರರಿಗೆ ತೊಂದರೆ ಉಂಟಾದರೆ ಮತ್ತೊಮ್ಮೆ ಪರಿಶೀಲಿಸಲಾಗುವುದು.| ಪ್ರಶಾಂತ ನಾಯಕ, ಇನ್ಸ್​ಪೆಕ್ಟರ್, ಪೂರ್ವ ಸಂಚಾರ ಠಾಣೆ

EndFragment