ಕಂಪ್ಲಿ: ವೀರ ರಾಣಿ ಕಿತ್ತೂರು ಚನ್ನಮ್ಮ ಅವರ ಧೈರ್ಯ, ಸಾಹಸ ಸ್ತ್ರೀಯರು, ಯುವ ಜನತೆಗೆ ಸ್ಫೂರ್ತಿಯಾಗಿದೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವದಲ್ಲಿ ಗುರುವಾರ ಮಾತನಾಡಿದರು. ಎಂತಹ ಸಂಕಷ್ಟವನ್ನೂ ಮೆಟ್ಟಿ ನಿಲ್ಲುವ ಚನ್ನಮ್ಮ ಅವರ ಮನೋಸ್ಥೈರ್ಯ ಶ್ಲಾಘನೀಯ ಎಂದು ಹೇಳಿದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ತಾಲೂಕು ಅಧ್ಯಕ್ಷ ಎಸ್.ಚಂದ್ರಶೇಖರಗೌಡ ಮಾತನಾಡಿ, ರಾಜ್ಯದ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಿಗೆ ಸೇರ್ಪಡೆಗೊಳಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಪಟ್ಟಣದಲ್ಲಿ ಚನ್ನಮ್ಮ ಹೆಸರಿನ ವೃತ್ತ ಸ್ಥಾಪಿಸಬೇಕು. ರಸ್ತೆಗೂ ಚನ್ನಮ್ಮ ಅವರ ಹೆಸರಿಡುವಂತೆ ಒತ್ತಾಯಿಸಿದರು.
ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ವೀರಶೈವ ಸಮಾಜದ ತಾಲೂಕ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಕೆ.ಎಂ.ಹೇಮಯ್ಯಸ್ವಾಮಿ, ಎಸ್.ಡಿ.ಬಸವರಾಜ, ಬಿ.ವಿ.ಗೌಡ, ಟಿ.ಶರಣಪ್ಪ, ಪುಟ್ಟಿ ಸಚಿನ್, ಜಿ.ಅಮರೇಗೌಡ, ಕನಕಗಿರಿ ರೇಣುಕಪ್ಪ, ಟಿ.ಶರಣಪ್ಪ, ಸಂತೋಷ ಸೋಗಿ, ಜಿ.ಕುಮಾರಸ್ವಾಮಿ, ಓಂಕಾರಗೌಡ, ಸಿ.ಶರಣಗೌಡ, ಶಶಿಧರ, ಚನ್ನಬಸವ, ಕೆ.ವೀರೇಶ್, ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.